ತೆಲಂಗಾಣ: ರಾಜ್ಯಸಭೆಯಲ್ಲಿ ಕೋಲಾಹಲ, ಕಲಾಪ ನಾಳೆಗೆ ಮುಂದೂಡಿಕೆ
ಸೀಮಾಂಧ್ರ ಪರ ಸಂಸದರ ಭಾರಿ ವಿರೋಧದಿಂದಾಗಿ ತೆಲಂಗಾಣ ಮಸೂದೆಗೆ ರಾಜ್ಯಸಭೆಯ ಅಂಗೀಕಾರ ಪಡೆಯಲು ಸಾಧ್ಯವಾಗಲಿಲ್ಲ.
ನವದೆಹಲಿ: ಸೀಮಾಂಧ್ರ ಪರ ಸಂಸದರ ಭಾರಿ ವಿರೋಧ ಮತ್ತು ತೆಲಂಗಾಣ ಪರ ವಿರೋಧಿ ಸಂಸದರ ಕೂಗಾಟದಿಂದಾಗಿ ತೆಲಂಗಾಣ ಮಸೂದೆಗೆ ರಾಜ್ಯಸಭೆಯ ಅಂಗೀಕಾರ ಪಡೆಯಲು ಸಾಧ್ಯವಾಗಲಿಲ್ಲ.
ಕಲಾಪದ ಆರಂಭದಿಂದಲೂ ಸೀಮಾಂಧ್ರ ಪರ ಸಂಸದರು ತೆಲಂಗಾಣಕ್ಕೆ ತಮ್ಮ ವಿರೋಧ ವ್ಯಕ್ತಪಡಿಸುತ್ತಿದ್ದರು. ಅಲ್ಲದೆ ಯುಪಿಎ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು. ಇದೇ ವೇಳೆ ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿಗಳು ಮಸೂದೆಯನ್ನು ಸಭೆಯಲ್ಲಿ ಮಂಡಿಸುತ್ತಿದ್ದ ವೇಳೆ ಟಿಡಿಪಿ ಸಂಸದ ರಮೇಶ್ ರಂಪಾಟವನ್ನೇ ಮಾಡಿದರು. ಪ್ರಧಾನ ಕಾರ್ಯದರ್ಶಿಗಳ ಕೈಯಲ್ಲಿದ್ದ ಕಾಗದ ಪತ್ರಗಳನ್ನು ಕಿತ್ತೆಸೆದು ಅವರ ಮೇಲೆ ಹಲ್ಲೆಗೆ ಮುಂದಾದರು. ಈ ವೇಳೆ ಮಾರ್ಷಲ್‌ಗಳು ಅವರನ್ನು ತಡೆದು ಕಲಾಪದಿಂದ ಅವರನ್ನು ಹೊರಹಾಕಿದರು.
ಸೀಮಾಂಧ್ರ ಸಂಸದರಿಗೆ ಬಿಎಸ್‌ಪಿ ಮತ್ತು ಎಸ್‌ಪಿ ಪಕ್ಷಗಳು ಬೆಂಬಲ ನೀಡಿ, ದನದ ಬಾವಿಗಳಿದು ಪ್ರತಿಭಟನೆ ನಡೆದರು. ಈ ವೇಳೆ ರಾಜ್ಯಸಭೆಯ ಉಪಾಧ್ಯಕ್ಷ ಪಿ.ಜೆ.ಕುರಿಯನ್ ಅವರು ಸಭೆಯನ್ನು 5 ಗಂಟೆಗೆ ಮುಂದೂಡಿದರು. ಮತ್ತೆ 5 ಗಂಟೆಗೆ ಕಲಾಪ ಆರಂಭವಾಯಿತಾದರು ಅದೇ ಪರಿಸ್ಥಿತಿ ನಿರ್ಮಾಣವಾದ್ದರಿಂದ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.
ಒಟ್ಟಾರೆ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ವಿಚಾರ ಉಭಯ ಸದನಗಳಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ.