ಅಧಿಕಾರ ಅಥವಾ ಕುರ್ಚಿ ನನ್ನ ಉದ್ದೇಶವಲ್ಲ: ನರೇಂದ್ರ ಮೋದಿ
ಅಧಿಕಾರ ಅಥವಾ ಕುರ್ಚಿ ನನ್ನ ಉದ್ದೇಶವಲ್ಲ. ಕೇವಲ ದೇಶ ಸೇವೆಗಾಗಿ ನಾನು ರಾಜಕಾರಣಕ್ಕೆ ಬಂದಿದ್ದೇನೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದ್ದಾರೆ.
ಅಹಮದಾಬಾದ್: ಅಧಿಕಾರ ಅಥವಾ ಕುರ್ಚಿ ನನ್ನ ಉದ್ದೇಶವಲ್ಲ. ಕೇವಲ ದೇಶ ಸೇವೆಗಾಗಿ ನಾನು ರಾಜಕಾರಣಕ್ಕೆ ಬಂದಿದ್ದೇನೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದ್ದಾರೆ.
ಅಹಮದಾಬಾದ್ ನಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ನರೇಂದ್ರ ಮೋದಿ ಅವರು, 'ದೇಶದ ರಾಜಕೀಯ ಚಿತ್ರಣ ಬದಲಾಗುತ್ತಿದೆ. ಅಧಿಕಾರ ಅಥವಾ ಕುರ್ಚಿ ನನ್ನ ಉದ್ದೇಶವಲ್ಲ. ಕೇವಲ ದೇಶ ಸೇವೆಗಾಗಿ ಮಾತ್ರ ನಾನು ರಾಜಕಾರಣಕ್ಕೆ ಬಂದಿದ್ದೇನೆ. ಮುಂಬರುವ ಲೋಕಸಭಾ ಚುನಾವಣೆ ದೇಶದ ಜನರಲ್ಲಿ ಹೊಸ ಕನಸುಗಳನ್ನು ತುಂಬಿದೆ. ಇದು ರಾಜಕೀಯ ಪಕ್ಷಗಳ ನಡುವಿನ ಚುನಾವಣೆಯಲ್ಲ, ದೇಶದ ಜನರ ಹೋರಾಟ. ಆದರೆ ಕಾಂಗ್ರೆಸ್ ಪಕ್ಷ ಜನರನ್ನು ಮುರ್ಖರನ್ನಾಗಿ ಮಾಡುತ್ತಿದೆ. ಕೇವಲ ಭರವಸೆಗಳನ್ನು ನೀಡುವುದರಲ್ಲಿಯೇ ಅದು ಕಾಲಹರಣ ಮಾಡುತ್ತಿದೆ. ಕಳೆದ 10 ವರ್ಷಗಳಿಂದ ದೇಶ ದುಃಸ್ಥಿತಿಗೆ ತಲುಪಿದ್ದು, ಕಾಂಗ್ರೆಸ್ ಪಕ್ಷದ ಅಧಿಕಾರಾವಧಿಯಲ್ಲಿ ಅದೋಗತಿಯತ್ತ ಸಾಗಿದೆ'.
'ವಿಶ್ವದಲ್ಲಿಯೇ ಅತಿಹೆಚ್ಚು ಯುವಕರು ಭಾರತದಲ್ಲಿದ್ದಾರೆ. ಯುವಶಕ್ತಿಗೆ ಎಲ್ಲವನ್ನೂ ಬದಲಾಯಿಸುವ ಶಕ್ತಿ ಇದೆ. ಆದರೆ ಕಾಂಗ್ರೆಸ್ ಸರ್ಕಾರ ಯುವಕರ ಹಾದಿ ತಪ್ಪಿಸುತ್ತಿದೆ. ಕಾಂಗ್ರೆಸ್ ಪಕ್ಷ ನಂಬಿಕೆಗೆ ಅರ್ಹವಲ್ಲ. ಕಾಂಗ್ರೆಸ್ ಯುವಜನತೆಗೆ ಏನೂ ಮಾಡಿಲ್ಲ. ಕೇವಲ ಹಗರಣಗಳಲ್ಲೇ ಅದು ಕಾಲ ಕಳೆಯುತ್ತಿದೆ' ಎಂದು ಮೋದಿ ಹೇಳಿದರು.