ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಉಭಯ ರಾಜ್ಯಗಳಿಗೂ ವಿಶೇಷ ಪ್ಯಾಕೇಜ್: ಪ್ರಧಾನಿ ಸಿಂಗ್

ಪ್ರತ್ಯೇಕ ತೆಲಂಗಾಣ ಮತ್ತು ಸೀಮಾಂಧ್ರ ರಾಜ್ಯಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸುವುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.

Srinivasa Murthy VN
Updated On : 20 Feb 2014, 8:07 am

ನವದೆಹಲಿ: ಪ್ರತ್ಯೇಕ ತೆಲಂಗಾಣ ಮತ್ತು ಸೀಮಾಂಧ್ರ ರಾಜ್ಯಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸುವುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ವಿಧೇಯಕದ ಕುರಿತ ಚರ್ಚೆಯಲ್ಲಿ ಮಾತನಾಡಿದ ಪ್ರಧಾನಿ ಮನಮೋಹನ್ ಸಿಂಗ್ ಅವರು, ರಾಜ್ಯ ವಿಭಜನೆಯಿಂದ ಯಾವುದೇ ಭಾಗದ ಜನತೆಗೂ ಅನ್ಯಾಯವಾಗುವುದಿಲ್ಲ. ಸಂಸತ್ತಿನ ಎಲ್ಲ ಅಧಿನಿಯಮಗಳ ಪ್ರಕಾರ ರಾಜ್ಯ ವಿಭಜನೆ ಮಾಡಿದ್ದು, ಸರ್ಕಾರ ಮತ್ತು ವಿಪಕ್ಷ ನಾಯಕರ ಅಭಿಪ್ರಾಯವನ್ನು ಸಂಗ್ರಹ ಮಾಡಲಾಗಿದೆ. ಉಭಯ ರಾಜ್ಯಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧ. ಉಭಯ ರಾಜ್ಯಗಳ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಅನ್ನು ಘೋಷಿಸಲಾಗುತ್ತದೆ. ಉಭಯ ರಾಜ್ಯಗಳಿಗೂ ಮುಂದಿನ 10 ವರ್ಷಗಳ ಕಾಲ ಹೈದರಾಬಾದ್ ಜಂಟಿ ರಾಜಧಾನಿಯಾಗಿರಲಿದೆ ಎಂದು ತಿಳಿಸಿದರು.

ಅಂತೆಯೇ ವಿಶೇಷವಾಗಿ ಸೀಮಾಂಧ್ರ ಭಾಗದ ಅಭಿವೃದ್ಧಿ 6 ಅಂಶಗಳ ಪ್ಯಾಕೇಜ್ ಅನ್ನು ಘೋಷಿಸಲಾಗುವುದು ಎಂದು ಸಿಂಗ್ ತಿಳಿಸಿದರು.

ಪ್ರಧಾನಿ ಸಿಂಗ್ ಮೇಲೆ ವಿಧೇಯಕದ ಪ್ರತಿ ಹರಿದು ಚೆಲ್ಲಿದ ಸೀಮಾಂಧ್ರ ಸಂಸದರು
ಇದೇ ವೇಳೆ ಪ್ರಧಾನಿ ಮನಮೋಹನ್ ಸಿಂಗ್ ಅವರು ವಿಧೇಯಕದ ಕುರಿತು ಮಾತನಾಡುತ್ತಿರುವಾಗಲೇ ಸೀಮಾಂಧ್ರ ಸಂಸದರು ಗದ್ದಲವೆಬ್ಬಿಸಿದರು. ಅಲ್ಲದೆ ಪ್ರಧಾನಿ ಸಿಂಗ್ ಭಾಷಣಕ್ಕೆ ಅಡ್ಡಿಪಡಿಸಿದ ಸಂಸದರು ವಿಧೇಯಕದ ಪ್ರತಿಯನ್ನು ಹರಿದು ಅವರ ತಲೆ ಮೇಲೆ ಚೆಲ್ಲಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement