ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬಾಂಬ್ ಬೆದರಿಕೆ: ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ 'ಹೈ ಅಲರ್ಟ್‌'

ವಿಮಾನ ನಿಲ್ದಾಣವನ್ನು ಸ್ಫೋಟಿಸುವ ಕುರಿತು ಅನಾಮಧೇಯ ಪತ್ರ ದೊರೆತ ಹಿನ್ನಲೆಯಲ್ಲಿ ನಿಲ್ದಾಣದಾದ್ಯಂತ ಭದ್ರತಾ ಸಿಬ್ಬಂಧಿಗಳು ತೀವ್ರ ತಪಾಸಣೆ ನಡೆಸುತ್ತಿದ್ದಾರೆ.

Srinivasa Murthy VN
Updated On : 21 Feb 2014, 3:24 am

ಹೈದರಾಬಾದ್: ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಫೋಟಿಸುವ ಕುರಿತು ಅನಾಮಧೇಯ ಪತ್ರ ದೊರೆತ ಹಿನ್ನಲೆಯಲ್ಲಿ ನಿಲ್ದಾಣದಾದ್ಯಂತ ಭದ್ರತಾ ಸಿಬ್ಬಂಧಿಗಳು ತೀವ್ರ ತಪಾಸಣೆ ನಡೆಸುತ್ತಿದ್ದಾರೆ.

ಇಂದು ಬೆಳಗ್ಗೆ ವಿಮಾನ ನಿಲ್ದಾಣದ ಮುಖ್ಯ ಭದ್ರತಾ ಅಧಿಕಾರಿಗಳಿಗೆ ಈ ಪತ್ರ ದೊರೆತಿದ್ದು, ಪತ್ರದಲ್ಲಿ ದೆಹಲಿಯಿಂದ ಆಗಮಿಸುವ ವಿಮಾನದಲ್ಲಿ ಸ್ಪೋಟಕಗಳನ್ನು ಹುದುಗಿಸಿಡಲಾಗಿದ್ದು ಹೈದರಬಾದ್ ನಿಲ್ದಾಣದಲ್ಲಿ ಅದು ಸ್ಪೋಟಗೊಳ್ಳುತ್ತದೆ ಎಂದು ಬರೆಯಲಾಗಿದೆ. ಹೀಗಾಗಿ ನಿಲ್ದಾಣದಾದ್ಯಂತ ಭದ್ರತಾ ಅಧಿಕಾರಿಗಳು ತೀವ್ರ ತಪಾಸಣೆ ನಡೆಸುತ್ತಿದ್ದಾರೆ.

ನಿನ್ನೆಯಷ್ಟೇ ರಾಜ್ಯಸಭೆಯಲ್ಲಿ ತೆಲಂಗಾಣ ಮಸೂದೆ ಅಂಗೀಕಾರಗೊಂಡಿದ್ದು, ಇಡೀ ಆಂಧ್ರ ಪ್ರದೇಶ ಪ್ರಕ್ಷುಬ್ದಗೊಂಡಿದೆ. ಇಂತಹ ಸ್ಥಿತಿಯಲ್ಲಿ ಈ ಪತ್ರ ದೊರೆತಿರುವುದು ನಿಲ್ದಾಣದ ಅಧಿಕಾರಿಗಳಿಗೆ ಹೊಸ ತಲೆನೋವು ತಂದೊಡ್ಡಿದೆ. ಈಗಾಗಲೇ ಹೈದರಾಬಾದ್ ಹೊರವಲಯದ ಶಂಷಾಬಾದ್ ನಲ್ಲಿರುವ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಒದಗಿಸಲಾಗಿರುವ ಭದ್ರತೆಯನ್ನು ತೀವ್ರಗೊಳಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement