ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ರಾಜಕಾರಣಿಗಳನ್ನು ಕ್ರೀಡಾ ಸಂಸ್ಥೆಗಳಿಂದ ಹೊರಗಿಡಿ: ರಾಹುಲ್ ಗಾಂಧಿ

ರಾಜಕಾರಣಿಗಳನ್ನು ಕ್ರೀಡಾ ಸಂಸ್ಥೆಗಳಿಂದ ಹೊರಗಿಡಬೇಕು ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಹೇಳಿದ್ದಾರೆ.

Srinivasa Murthy VN
Updated On : 21 Feb 2014, 5:54 am

ನವದೆಹಲಿ: ರಾಜಕಾರಣಿಗಳನ್ನು ಕ್ರೀಡಾ ಸಂಸ್ಥೆಗಳಿಂದ ಹೊರಗಿಡಬೇಕು ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಹೇಳಿದ್ದಾರೆ.

ದೆಹಲಿಯ ಜವಾಹರ್ ಲಾಲ್ ನೆಹರು ಕ್ರೀಡಾಗಂಣದಲ್ಲಿ ನಡೆದ ರಾಜೀವ್ ಗಾಂಧಿ ಖೇಲ್ ಅಭಿಯಾನ್ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್, ಕ್ರೀಡಾಸಂಸ್ಥೆಗಳಲ್ಲಿ ಗುರ್ತಿಸಿಕೊಳ್ಳುತ್ತಿರುವ ರಾಜಕಾರಣಿಗಳ ವಿರುದ್ಧ ಕಿಡಿಕಾರಿದರು. 'ರಾಜಕಾರಣಿಗಳನ್ನು ಕ್ರೀಡಾ ಸಂಸ್ಥೆಯ ಆಡಳಿತದಿಂದ ದೂರವಿಡಬೇಕು. ಹಿರಿಯ ಕ್ರೀಡಾಪಟುಗಳೇ ಸಂಸ್ಥೆಯ ಆಡಳಿತಾತ್ಮಕ ಹುದ್ದೆಗೇರಬೇಕು' ಎಂದು ಹೇಳಿದರು.

'ಕ್ರೀಡಾಕ್ಷೇತ್ರ ಅಭಿವೃದ್ಧಿಯಾಗಬೇಕು ಎಂದರೆ ಮೊದಲು ರಾಜಕಾರಣಿಗಳನ್ನು ಕ್ರೀಡಾ ಸಂಸ್ಥೆಯಿಂದ ಹೊರಗಿಡಬೇಕು. ಕ್ರೀಡಾಪಟುಗಳೇ ಆಡಳಿತ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಬೇಕು. ಆಗ ಮಾತ್ರ ಅಭಿವೃದ್ಧಿ ಸಾಧ್ಯ. ಕ್ರೀಡಾಪಟುಗಳು ಕೇವಲ ಉತ್ತಮ ಆಟವನ್ನು ಗಮನಿಸುತ್ತಾರೆ. ಹೀಗಾಗಿ ಅವರೇ ಆಡಳಿತ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವುದು ಉತ್ತಮ. ಅಂತೆಯೇ ರಾಜಕೀಯದಲ್ಲಿಯೂ ಬದಲಾವಣೆ ತರಬೇಕೆಂದರೆ ರಾಜಕಾರಣದಲ್ಲಿ ಯುವಕರಿಗೆ ಹೆಚ್ಚು ಪ್ರಾಧಾನ್ಯತೆ ನೀಡಬೇಕು. ಸಾಮಾನ್ಯ ಪ್ರಜೆಗಳಿಗೂ ಹೆಚ್ಚು ಅಧಿಕಾರ ನೀಡಬೇಕು. ಆಗ ಮಾತ್ರ ರಾಜಕಾರಣದಲ್ಲಿ ಬದಲಾವಣೆ ತರಲು ಸಾಧ್ಯ' ಎಂದು ರಾಹುಲ್ ಹೇಳಿದರು.

ನವದೆಹಲಿಯಲ್ಲಿ ನಡೆದ ಈ ರಾಷ್ಟ್ರೀಯ ಯುವ ಪಾಲಿಸಿ 2014 ಮತ್ತು ರಾಜೀವ್ ಗಾಂಧಿ ಖೇಲ್ ಅಭಿಯಾನ ಕಾರ್ಯಕ್ರಮದಲ್ಲಿ ಕೇಂದ್ರ ಕ್ರೀಡಾ ಸಚಿವ ಜಿತೇಂದ್ರ ಸಿಂಗ್ ಸೇರಿದಂತೆ ಕ್ರೀಡಾಪಟುಗಳಾದ ಮೇರಿಕೋಮ್, ವಿಜೇಂದರ್ ಸಿಂಗ್, ಕೋಟ್ ಪಿ.ಗೋಪಿಚಂದ್, ಅಥ್ಲೀಟ್ ಅಶ್ವಿನಿ ನಾಚಪ್ಪ ಮತ್ತು ಕರ್ಣಮ್ ಮಲ್ಲೇಶ್ವರಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement