ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ವಿಮಾನ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಸಿಸಿಎಲ್ ಆಟಗಾರರು

ಸಿಸಿಎಲ್ ನಲ್ಲಿ ಪಾಲ್ಗೊಂಡಿರುವ ಕೇರಳ ತಂಡದ ಆಟಗಾರರು ವಿಮಾನದ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಛೀಮಾರಿ ಹಾಕಿಸಿಕೊಂಡಿದ್ದಾರೆ.

Srinivasa Murthy VN
Updated On : 21 Feb 2014, 7:28 am

ಕೊಚ್ಚಿನ್: ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಸರಣಿಯಲ್ಲಿ ಪಾಲ್ಗೊಂಡಿರುವ ಕೇರಳ ತಂಡದ ಆಟಗಾರರು ವಿಮಾನದ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಛೀಮಾರಿ ಹಾಕಿಸಿಕೊಂಡಿದ್ದಾರೆ.

ಕೊಚ್ಚಿನ್‌ನಿಂದ ಹೈದರಾಬಾದ್‌ಗೆ ತೆರಳುತಿದ್ದ ಇಂಡಿಗೋ ವಿಮಾನದಲ್ಲಿನ ಸಿಬ್ಬಂದಿ ಸುರಕ್ಷತೆಯ ಬಗ್ಗೆ ಸಲಹೆ ನೀಡುತ್ತಿದ್ದ ವೇಳೆಯಲ್ಲಿ ಈ ಎಲ್ಲ ಆಟಗಾರರು ಅನುಚಿತವಾಗಿ ವರ್ತಿಸಿದ್ದಾರೆ. ಅಲ್ಲದೆ ವಿಮಾನದ ಪೈಲೆಟ್‌ರೊಂದಿಗೂ ಕೂಡ ವಾಗ್ವಾದ ನಡೆಸಿ ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಾರೆ. ಈ ಜಗಳ ತೀವ್ರ ಸ್ಪರೂಪ ಪಡೆದು ಕೊನೆಗೆ ವಿಮಾನದ ಪೈಲಟ್ ಈ ಎಲ್ಲ ಆಟಗಾರರೂ ವಿಮಾನದಿಂದ ಕೆಳಗಿಳಿಯದ ಹೊರತು ತಾವು ವಿಮಾನ ಚಾಲನೆ ಮಾಡುವುದಿಲ್ಲ ಎಂದು ವಿಮಾನವನ್ನು ಸ್ಥಗಿತಗೊಳಿಸಿದ್ದಾರೆ.

ಸುಮಾರು ಒಂದೂವರೆ ಗಂಟೆಯವರೆಗೂ ವಿಮಾನ ಚಾಲನೆ ಪಡೆಯಲೇ ಇಲ್ಲ. ಕೊನೆಗೆ ಎಲ್ಲ ಆಟಗಾರರೂ ಮತ್ತೊಮ್ಮೆ ವಿಮಾನ ಟಿಕೆಟ್‌ಗಳನ್ನು ಖರೀದಿ ಮಾಡಿ ಅದೇ ವಿಮಾನದಲ್ಲಿ ಹೈದರಾಬಾದ್ ನತ್ತ ಪ್ರಯಾಣ ಮಾಡಿದ್ದಾರೆ. 1 ಗಂಟೆಗೆ ಟೇಕ್ ಆಫ್ ಆಗಬೇಕಿದ್ದ ವಿಮಾನ ಕೊನೆಗೆ 4.30ಕ್ಕೆ ಟೇಕ್ ಆಫ್ ಆಗಿ ಹೈದರಾಬಾದ್ ತಲುಪಿದೆ. ವಿಮಾನದಲ್ಲಿನ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ ತೋರಿದೆ ಕೇರಳ ಸ್ಟ್ರೈಕರ್ಸ್ ತಂಡ ಆಟಗಾರರ ವರ್ತನೆಯನ್ನು ಭದ್ರತಾ ಅಧಿಕಾರಿಗಳು ನಿಲ್ದಾಣದಲ್ಲಿಯೇ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ನಟರು ಅಭಿಮಾನಿಗಳನ್ನು ನೆಚ್ಚಿಸಲು ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಂಡಿರುವ ಇವರು ಇದೀಗ ತಮ್ಮ ಕೋತಿಚೇಷ್ಟೆಯಿಂದಾಗಿ ಮಾಧ್ಯಮಗಳ ಆಹಾರವಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement