ಸೌಂಡ್ ರೆಕಾರ್ಡಿಂಗ್ ಮತ್ತು ಡಿಸೈನ್ ಕುರಿತ ವಿಶೇಷ ಕಾರ್ಯಗಾರ
ಬೆಂಗಳೂರು: ಬೆಂಗಳೂರಿನ ಕೆ.ವಿ.ಸುಬ್ಬಣ್ಣ ಆಪ್ತ ರಂಗಮಂದಿರದಲ್ಲಿ ಇದೇ ಭಾನುವಾರ ಸಂಜೆ ಸೌಂಡ್ ರೆಕಾರ್ಡಿಂಗ್ ಮತ್ತು ಡಿಸೈನ್ ಕುರಿತ ಕಾರ್ಯಗಾರ ನಡೆಯಲಿದ್ದು, ಖ್ಯಾತ ಚಲನಚಿತ್ರ ಛಾಯಾಗ್ರಾಹಕ ಜಿ.ಎಸ್.ಭಾಸ್ಕರ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.
ಬೆಂಗಳೂರಿನ ದಾನಂದ ಸಾಗರ ಕಾಲೇಜು ಸಮೀಪವಿರುವ ಕೆ.ವಿ.ಸುಬ್ಬಣ್ಣ ಆಪ್ತರಂಗಮಂದಿರದಲ್ಲಿ ಈ ಕಾರ್ಯಕ್ರಮ ನೆರವೇರಲಿದ್ದು, ಸೌಂಡ್ ರೆಕಾರ್ಡಿಂಗ್ ಮತ್ತು ಸೌಂಡ್ ಡಿಸೈನ್ ಕುರಿತ ವಿಶೇಷ ಪ್ರವಚನವನ್ನು ಎಸ್.ಮಹಾವೀರ್ ಅವರು ಪ್ರಸ್ತುತ ಪಡಿಸಲಿದ್ದಾರೆ. ನಂತರ ಖ್ಯಾತ ಚಲನಚಿತ್ರ ಛಾಯಾಗ್ರಾಹಕ ಜಿ.ಎಸ್.ಭಾಸ್ಕರ್ ಅವರು ಈ ಕುರಿತು ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಬಳಿಕ ಖ್ಯಾತ ನಿರ್ದೇಶಕ ಬಾಲು ಮಹೇಂದರ್ ಅವರ ನಿರ್ದೇಶನದ ಮತ್ತು ಕಮಲ್ ಹಾಸನ್ ನಟಸಿರುವ 'ಕೋಕಿಲ' ಚಿತ್ರದ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಸ್ಥಳ-ಕೆ.ವಿ.ಸುಬ್ಬಣ್ಣ ಆಪ್ತರಂಗಮಂದಿರ
ನಂ-151, 7ನೇ ಕ್ರಾಸ್, ಟೀಚರ್ಸ್ ಕಾಲೋನಿ (ಮೊದಲ ಹಂತ)
ದಯಾನಂದ ಸಾಗರ ಕಾಲೇಜು ಸಮೀಪ, ವಸುಧ ಭವನ ಎದುರು
ಬೆಂಗಳೂರು-560078
ಮೊಬೈಲ್ ಸಂಖ್ಯೆ-ಗೋಪಿನಾಥ್-9964152999