ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮೀನುಗಾರರ ಹತ್ಯೆ: ಇಟಲಿಯೊಂದಿಗೆ ರಾಜಿ ಪ್ರಶ್ನೆಯೇ ಇಲ್ಲ: ಆಂಟನಿ

ಮೀನುಗಾರರ ಹತ್ಯೆ ಪ್ರಕರಣದ ಕುರಿತು ಯಾವುದೇ ಕಾರಣಕ್ಕೂ ಇಟಲಿಯೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಎ.ಕೆ.ಆಂಟನಿ ಹೇಳಿದ್ದಾರೆ.

Srinivasa Murthy VN
Updated On : 23 Feb 2014, 7:19 am

ನವದೆಹಲಿ: ಭಾರತೀಯ ಮೀನುಗಾರರ ಹತ್ಯೆ ಪ್ರಕರಣದ ಕುರಿತು ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರ ಇಟಲಿಯೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ಎ.ಕೆ.ಆಂಟನಿ ಹೇಳಿದ್ದಾರೆ.

ಇಟಲಿ ನೌಕಾಪಡೆ ಸಿಬ್ಬಂದಿಗಳು ಕೇರಳದಲ್ಲಿ ಭಾರತೀಯ ಮೀನುಗಾರರನ್ನು ಹತ್ಯೆಗೈದ ಪ್ರಕರಣ ಸಂಬಂಧ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಹಿಂಜರಿಯವುದಿಲ್ಲ. ಭಾರತೀಯ ಸಂವಿಧಾನ ಬದ್ಧ ಮತ್ತು ಭಾರತೀಯ ಕಾನೂನಿನ ಪ್ರಕಾರವೇ ಪ್ರಕರಣದ ವಿಚಾರಣೆ ನಡೆಯಲಿದೆ. ಪ್ರಕರಣದ ಮೇಲ್ವಿಚಾರಣೆಯನ್ನು ಕೇಂದ್ರ ಗೃಹ ಇಲಾಖೆ ಮತ್ತು ವಿದೇಶಾಂಗ ಇಲಾಖೆ ನೋಡಿಕೊಳ್ಳುತ್ತಿದ್ದು, ಭಾರತೀಯ ಕಾನೂನಿನ ಅನ್ವಯವೇ ಪ್ರಕರಣದ ವಿಚಾರಣೆ ನಡೆಯಲಿದೆ ಎಂದು ಆಂಟನಿ ತಿಳಿಸಿದರು.

ವಿಶ್ವದಲ್ಲಿಯೇ ಭಾರತೀಯ ಸೇನೆ ಮತ್ತು ಭಾರತೀಯ ನೌಕಾದಳ ವೇಗವಾಗಿ ಬೆಳೆಯುತ್ತಿದ್ದು, ವಿಶ್ವದ ಬಲಿಷ್ಟ ಸೇನೆಗಳ ಪಟ್ಟಿಯಲ್ಲಿ ಭಾರತ ಕೂಡ ಒಂದು. ಭಾರತ,    ಆಫ್ರಿಕಾ ಮತ್ತು ಯೂರೋಪ್ ಸೇರಿದಂತೆ ವಿಶ್ವದ ಸುಮಾರು 48 ದೇಶಗಳೊಂದಿಗೆ ರಕ್ಷಣಾ ಒಪ್ಪಂದವನ್ನು ಮಾಡಿಕೊಂಡಿದೆ. ಚೀನಾದೊಂದಿಗಿನ ನಮ್ಮ ಸಂಬಂಧ ಕೂಡ ಉತ್ತಮಗೊಳ್ಳುತ್ತಿದೆ. ಭಾರತ ಮತ್ತು ಚೀನಾ ದೇಶಗಳು ಬಹು ವಿಸ್ತಾರವಾದ ಗಡಿಯನ್ನು ಹೊಂದಿದ್ದು, ಪ್ರಸ್ತುತ ಗಡಿಯುದ್ದಕ್ಕೂ ಶಾಂತಿ ನೆಲೆಸಿದೆ. ಚೀನಾದೊಂದಿಗೆ ಸೇರಿ ಶೀಘ್ರದಲ್ಲಿಯೇ ವಾಯುಸೇನೆ ಮತ್ತು ಭೂಸೇನಾ ಸೈನಿಕರು ಜಂಟಿ ತರಬೇತಿ ನಡೆಸಲಿದ್ದಾರೆ.

ಚೀನಾದೊಂದಿಗೆ ಭಾರತದ ಸಂಬಂಧ ಉತ್ತಮಗೊಳ್ಳುತ್ತಿದೆ ಅಂತೆಯೇ ಗಡಿಯಲ್ಲಿರುವ ಸುಮಾರು 8ರಿಂದ 10 ಪ್ರದೇಶಗಳ ಕುರಿತು ಉಭಯ ದೇಶಗಳೊಡನೆ ಭಿನ್ನಾಭಿಪ್ರಾಯಗಳಿರುವುದು ಕೂಡ ಅಷ್ಟೇ ಸತ್ಯ. ಮಾತುಕತೆ ಮೂಲಕ ಅದನ್ನು ಇತ್ಯರ್ಥಗೊಳಿಸಬಹುದು ಎಂದು ಆಂಟನಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement