ಆರ್ ಜೆಡಿಯಲ್ಲಿ ಭಿನ್ನಮತ ಸ್ಪೋಟ, 13 ಶಾಸಕರ ರಾಜಿನಾಮೆ
ಬಿಹಾರದ ಆರ್ಜೆಡಿ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, 13 ಶಾಸಕರು ಲಾಲು ಪ್ರಸಾದ್ ಯಾದವ್ ಅವರ ಆರ್ ಜೆಡಿ ಪಕ್ಷವನ್ನು ತೊರೆದಿದ್ದಾರೆ.
ಪಾಟ್ನಾ: ಬಿಹಾರದ ಆರ್ಜೆಡಿ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, 13 ಶಾಸಕರು ಲಾಲು ಪ್ರಸಾದ್ ಯಾದವ್ ಅವರ ಆರ್ ಜೆಡಿ ಪಕ್ಷವನ್ನು ತೊರೆದಿದ್ದಾರೆ.
ಮುಂಬರುವ ಲೋಕಭಾ ಚುನಾವಣೆಯಲ್ಲಿ ಟಿಕೆಟ್ ನೀಡುವುದಿಲ್ಲ ಎಂದು ಆರೋಪಿಸಿ 13 ಶಾಸಕರು ಲಾಲು ಪ್ರಸಾದ್ ಯಾದವ್ ಅವರ ಆರ್ ಜೆಡಿ ಪಕ್ಷವನ್ನು ತೊರೆದಿದ್ದಾರೆ. ಈಗಾಗಲೇ ಈ ಎಲ್ಲ ಶಾಸಕರು ತಮ್ಮ ತಮ್ಮ ರಾಜಿನಾಮೆ ಪತ್ರವನ್ನು ಬಿಹಾರ ವಿಧಾನಸಭೆಯ ಸ್ಪೀಕರ್ ಅವರಿಗೆ ಸಲ್ಲಿಸಿದ್ದಾರೆ.
ಜೆಡಿಯುನತ್ತ ಮುಖ ಮಾಡಿದ ಶಾಸಕರು
ಇದೇ ವೇಳೆ ಆರ್ ಜೆಡಿ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ತೊರೆದಿರುವ ಶಾಸಕರು, ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷ ಸೇರಲು ಉತ್ಸುಕರಾಗಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಅತೃಪ್ತ ಶಾಸಕರ ಗುಂಪು ಈಗಾಗಲೇ ಜೆಡಿಯು ಪಕ್ಷದ ಮುಖಂಡರೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.