ಎಲ್ಪಿಜಿ ವಿತರಕರ ಮುಷ್ಕರ ಹಿಂತೆಗೆತ
ಇದೇ ಫೆಬ್ರವರಿ 25ರಿಂದ ನಿಗದಿಯಾಗಿದ್ದ ಅನಿರ್ಧಿಷ್ಟಾವಧಿ ಎಲ್ಪಿಜಿ ವಿತರಕಣೆಯ ಬಂದ್ ಅನ್ನು ಹಿಂಪಡೆಯಲಾಗಿದೆ.
ನವದೆಹಲಿ: ಇದೇ ಫೆಬ್ರವರಿ 25ರಿಂದ ನಿಗದಿಯಾಗಿದ್ದ ಅನಿರ್ಧಿಷ್ಟಾವಧಿ ಎಲ್ಪಿಜಿ ವಿತರಕಣೆಯ ಬಂದ್ ಅನ್ನು ಹಿಂಪಡೆಯಲಾಗಿದೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆಯಿಂದ ಅನಿರ್ಧಿಷ್ಟಾವಧಿ ಬಂದ್ ಘೋಷಿಸಿದ್ದ ಎಲ್ಪಿಜಿ ವಿತರಕರು ತಮ್ಮ ಬಂದ್ ಅನ್ನು ಹಿಂಪಡೆದಿದ್ದಾರೆ. ತೈಲ ಕಂಪನಿಗಳು ತಮ್ಮ ಬೇಡಿಕೆ ಈಡೇರಿಸುವ ಕುರಿತು ಭರವಸೆ ನೀಡಿದ ಹಿನ್ನಲೆಯಲ್ಲಿ ತಮ್ಮ ಮುಷ್ಕರವನ್ನು ಹಿಂಪಡೆಯುತ್ತಿರುವುದಾಗಿ ರಾಜ್ಯ ಎಲ್ಪಿಜಿ ವಿತರಕರ ಸಂಘದ ಕಾರ್ಯದರ್ಶಿ ಸತ್ಯನ್ ಸ್ಪಷ್ಟಪಡಿಸಿದ್ದಾರೆ.