ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಓರ್ವ ವ್ಯಕ್ತಿಯಿಂದ ದೇಶ ಮುನ್ನಡೆಸಲು ಸಾಧ್ಯವಿಲ್ಲ: ರಾಹುಲ್

ದೇಶವನ್ನು ಮುನ್ನಡೆಸಲು ಮತ್ತು ಅಭಿವೃದ್ದಿಯತ್ತ ನಡೆಸುವುದು ಓರ್ವ ವ್ಯಕ್ತಿಯಿಂದ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.

Srinivasa Murthy VN
Updated On : 24 Feb 2014, 6:00 am

ಸೋನ್‌ಪತ್ (ಹರ್ಯಾಣ): ದೇಶವನ್ನು ಮುನ್ನಡೆಸಲು ಮತ್ತು ಅಭಿವೃದ್ದಿಯತ್ತ ನಡೆಸುವುದು ಓರ್ವ ವ್ಯಕ್ತಿಯಿಂದ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.

ಹರ್ಯಾಣದ ಸೋನ್‌ಪತ್‌ನಲ್ಲಿ ನಡೆದ ರೈತರೊಂದಿಗಿನ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 'ಓರ್ವ ವ್ಯಕ್ತಿ ಮಾತ್ರವೇ ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ. ಅಧಿಕಾರ ಏಕವ್ಯಕ್ತಿಯಲ್ಲಿ ಕೇಂದ್ರೀಕರಣಗೊಳ್ಳುವುದು ತುಂಬಾ ಅಪಾಯಕಾರಿ. ಅಧಿಕಾರ ಕೇಂದ್ರೀಕರಣದಿಂದ ವ್ಯಕ್ತಿ ಸರ್ವಾಧಿಕಾರಿಯಾಗುತ್ತಾನೆ. ಇದರಿಂದ ದೇಶದ ಭವಿಷ್ಯಕ್ಕೆ ತುಂಬಾ ಅಪಾಯ. ಆದರೆ ಇದೇ ನೀತಿಯಲ್ಲಿ ಬಿಜೆಪಿ ವಿಶ್ವಾಸಹೊಂದಿದೆ' ಎಂದು ರಾಹುಲ್ ಗಾಂಧಿ ಹೇಳಿದರು.

'ನಾವು ದೇಶದ ಪ್ರತಿಯೊಬ್ಬ ನಾಗರೀಕನ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ. ಈ ದೇಶದ ಪ್ರತಿಯೊಬ್ಬ ನಾಗರೀಕನೂ ತನ್ನ ಆರೋಗ್ಯದ ಹಕ್ಕನ್ನು ಸಂಪೂರ್ಣವಾಗಿ ಪಡೆಯುವಂತೆ ನಾವು ಮಾಡುತ್ತೇವೆ. ದೇಶದ ಪ್ರತಿಯೊಬ್ಬ ನಾಗರೀಕನಿಗೂ ಅಧಿಕಾರ ಹಂಚಿಕೆಯಾಗಬೇಕು. ದೇಶದ ಪ್ರಜೆಗೆ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ನಾವು ದೇಶದ ರೈತರನ್ನು ಬೆಳಸಿದರೆ ಮಾತ್ರ ಅವರು ಬೇರೆ ವರ್ಗಗಳನ್ನು ಬೆಳೆಸುತ್ತಾರೆ. ನಿಮಗೆ ಆಯ್ಕೆ ನೀಡುವುದಷ್ಟೇ ನಮ್ಮ ಗುರಿಯಾಗಿದ್ದು, ನಿಮಗೆ ಆಜ್ಞೆ ಮಾಡುವುದಲ್ಲ. ಅದನ್ನು ಬಿಜೆಪಿ ಮಾಡುತ್ತಿದೆ. ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆಯೇ ಹೊರತು, ಭ್ರಷ್ಟಾಚಾರ ನಿಯಂತ್ರಣಕ್ಕೆ ಸ್ಪಂಧಿಸುತ್ತಿಲ್ಲ' ಎಂದು ರಾಹುಲ್ ಗಾಂಧಿ ಹೇಳಿದರು.

ಒಟ್ಟಾರೆ ಹರ್ಯಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಉಪಾದ್ಯಕ್ಷ ರಾಹುಲ್ ಗಾಂಧಿ ಅವರು ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement