ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸಿ.ಆರ್.ಸಿಂಹ ಪಂಚಭೂತಗಳಲ್ಲಿ ಲೀನ

ಶುಕ್ರವಾರ ನಿಧನರಾಗಿದ್ದ ಖ್ಯಾತ ರಂಗಕರ್ಮಿ, ನಟ, ನಿರ್ದೇಶಕ ಸಿ.ಆರ್.ಸಿಂಹ ಅವರ ಅಂತ್ಯ ಸಂಸ್ಕಾರ ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ನೆರವೇರಿತು.

Srinivasa Murthy VN
Updated On : 1 Mar 2014, 7:06 am

ಬೆಂಗಳೂರು: ಶುಕ್ರವಾರ ನಿಧನರಾಗಿದ್ದ ಖ್ಯಾತ ರಂಗಕರ್ಮಿ, ನಟ, ನಿರ್ದೇಶಕ ಸಿ.ಆರ್.ಸಿಂಹ ಅವರ ಅಂತ್ಯ ಸಂಸ್ಕಾರ ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ನೆರವೇರಿತು.

ನಿನ್ನೆ ನಿಧನರಾಗಿದ್ದ ಸಿ.ಆರ್.ಸಿಂಹ ಅವರ ಪಾರ್ಥೀವ ಶರೀರವನ್ನು ಇಂದು ಬೆಳಗ್ಗೆ ರವೀಂದ್ರ ಕಲಾಕ್ಷೇತ್ರದ ಸಂಸಬಯಲು ರಂಗಮಂದಿರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ರಂಗಭೂಮಿಯ ನೂರಾರು ಗಣ್ಯರು, ಸಿನಿ ಕಲಾವಿದರು, ನಿರ್ದೇಶಕರು, ಕಿರುತೆರೆ ನಟರು ಮತ್ತು ಅಭಿಮಾನಿಗಳು ಸೇರಿದಂತೆ ನೂರಾರು ಮಂದಿ ಸಿಂಹ ಅವರ ಪಾರ್ಥೀವ ಶರೀರದ ದರ್ಶನ ಮಾಡಿದರು.

ನಂತರ ಸಂಜೆ 5 ಗಂಟೆಯ ಹೊತ್ತಿಗೆ ಬನಶಂಕರಿ ಚಿತಾಗಾರದಲ್ಲಿ ಸಿಂಹ ಅವರ ಅಂತಿಮ ವಿಧಿವಿಧಾನವನ್ನು ನೆರವೇರಿಸಲಾಯಿತು. ಸಿ.ಆರ್. ಸಿಂಹ ಅವರ ಮಗ ರಿತ್ವಿಕ್ ಸಿಂಹ ಅವರು ಅಂತಿಮ ವಿಧಿ ವಿಧಾನವನ್ನು ನೆರವೇರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement