ಸೇನಾ ಗೂಢಾಚಾರ ಸಂಸ್ಥೆಯ ಹಿರಿಯ ಅಧಿಕಾರಿ ಆತ್ಮಹತ್ಯೆ
ಸೇನಾ ಗೂಢಾಚಾರ ಸಂಸ್ಥೆಯ ಹಿರಿಯ ಅಧಿಕಾರಿ ಆನಂದ್ ಚಕ್ರವರ್ತಿ ಎಂಬುವವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ನವದೆಹಲಿ: ಸೇನಾ ಗೂಢಾಚಾರ ಸಂಸ್ಥೆಯ ಹಿರಿಯ ಅಧಿಕಾರಿ ಆನಂದ್ ಚಕ್ರವರ್ತಿ ಎಂಬುವವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸೇನಾ ಗೂಢಾಚಾರ ಸಂಸ್ಥೆ 'ರಾ'ದ ಹಿರಿಯ ಅಧಿಕಾರಿ ಆನಂದ್ ಚಕ್ರವರ್ತಿ ಎಂಬುವವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ನವದೆಹಲಿಯ ಸಿದ್ಧಿಕಿ ನಗರದಲ್ಲಿರುವ ಅವರ ಮನೆಯಲ್ಲಿ ಆನಂದ್ ಚಕ್ರವರ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಆನಂದ್ ಚಕ್ರವರ್ತಿ ಅವರು ತಮ್ಮ ಪತ್ನಿ ಮಕ್ಕಳನ್ನು ಕೊಂದು ನಂತರ ಅವರು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನಾ ಸ್ಥಳಕ್ಕಾಗಮಿಸಿರುವ ದೆಹಲಿ ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸೇನಾ ಗೂಢಾಚಾರ ಸಂಸ್ಥೆ 'ರಾ' ಅಧಿಕಾರಿಯಾಗಿದ್ದ ಆನಂದ್ ಚಕ್ರವರ್ತಿ ಅವರು ಸಂಸ್ಥೆಯ ಹಿರಿಯ ಅಧಿಕಾರಿಯಾಗಿದ್ದರು. ಅವರ ಸಂಬಂಧಿಕರು ಹೇಳುವಂತೆ ದಂಪತಿಗಳಲ್ಲಿ ಯಾವುದೇ ಭಿನ್ನಾಭಿಪ್ರಾಯವಿರಲಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವಂತಹ ಮನೋಭಾವ ಅವರದಲ್ಲ ಎಂದು ಸಂಬಂಧಿಕರು ಹೇಳಿದ್ದಾರೆ. ಹೀಗಾಗಿ ಅವರ ಸಾವಿನ ಕುರಿತು ಹಲವು ಶಂಕೆಗಳು ವ್ಯಕ್ತವಾಗುತ್ತಿದ್ದು, ಅವರದು ಆತ್ಮಹತ್ಯೆಯೋ ಅಥವಾ ಹತ್ಯೆಯೋ ಎಂಬ ಶಂಕೆ ವ್ಯಕ್ತವಾಗುತ್ತಿದೆ.