311 ಅಂಕಗಳ ದಾಖಲೆ ಕುಸಿತ ಕಂಡ ಸೆನ್ಸೆಕ್ಸ್
ಷೇರುಪೇಟೆಯಲ್ಲಿ ಮತ್ತೆ ಕುಸಿತ ಕಂಡುಬಂದಿದ್ದು, ಸೋಮವಾರ ಸೆನ್ಸೆಕ್ಸ್ 311 ಅಂಕಗಳ ದಾಖಲೆಯ ಕುಸಿತಕಂಡಿದೆ.
ಮುಂಬೈ: ಷೇರುಪೇಟೆಯಲ್ಲಿ ಮತ್ತೆ ಕುಸಿತ ಕಂಡುಬಂದಿದ್ದು, ಸೋಮವಾರ ಸೆನ್ಸೆಕ್ಸ್ 311 ಅಂಕಗಳ ದಾಖಲೆಯ ಕುಸಿತಕಂಡಿದೆ.
ಭಾರತೀಯ ರಿಸರ್ವ್ ಬ್ಯಾಂಕ್ನ ನೂತನ ಹಣಕಾಸು ನೀತಿ ಹೊರಬಿದ್ದ ಬೆನ್ನಲ್ಲೇ ಷೇರುದಾರರು ಒಮ್ಮೆಲೇ ತಮ್ಮ ಷೇರುಗಳನ್ನು ಮಾರಲು ಮುಂದಾಗಿದ್ದು, ಇದರಿಂದ ಷೇರುಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. 20.899 ಅಂಕಗಳನ್ನು ಹೊಂದಿದ್ದ ಸೆನ್ಸೆಕ್ಸ್, ಇಂದು 311 ಅಂಕಗಳನ್ನು ಕಳೆದುಕೊಂಡಿದೆ. ನಿಫ್ಟಿಯಲ್ಲಿ ಕೂಡ ಕುಸಿತ ಕಂಡು ಬಂದಿದ್ದು, 95.85 ಅಂಕಗಳನ್ನು ನಿಫ್ಟಿ ಕಳೆದುಕೊಂಡಿದೆ.
ಷೇರುಪೇಟೆಯಲ್ಲಿನ ಈ ದಿಢೀರ್ ಪರಿಣಾಮದಿಂದಾಗಿ ಟಾಟಾ ಮೋಟರ್ಸ್, ಟಾಟಾ ಸ್ಟೀಲ್ಸ್, ಐಸಿಐಸಿಐ ಬ್ಯಾಂಕ್, ಭಾರ್ತಿ ಏರ್ ಟೆಲ್ ಸೇರಿದಂತೆ ಹಲವು ಸಂಸ್ಥೆಗಳಿಗೆ ನಷ್ಟ ಉಂಟಾಗಿದೆ. ಪ್ರಮುಖವಾಗಿ ಟಾಟಾ ಮೋಟರ್ಸ್ ಶೇ.4.72, ಹಿಂಡಲ್ಕೋ 3.69, ಟಾಟಾ ಸ್ಟೀಲ್ಸ್, ಐಸಿಐಸಿಐ ಬ್ಯಾಂಕ್ 3.55, ಆಕ್ಸಿಸ್ ಬ್ಯಾಂಕ್ 3.10, ಎಂ ಅಂಡ್ ಎಂ 2.41, ಹೆಚ್ಡಿಎಫ್ಸಿ 2.31 ಮತ್ತು ಭಾರ್ತಿ ಏರ್ಟೆಲ್ 2.12ರಷ್ಟು ನಷ್ಟವಾಗಿದೆ.