ಇರಾಕ್: ಉಗ್ರರ ದಾಳಿಗೆ 12 ಸಾವು
ಇರಾಕ್‌ನ ವಿವಿಧೆಡೆ ಉಗ್ರರು ನಡೆಸಿದ ದಾಳಿಯಿಂದಾಗಿ ಯೋಧರು ಸೇರಿದಂತೆ 12 ಮಂದಿ ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಾಗ್ದಾದ್: ಇರಾಕ್‌ನ ವಿವಿಧೆಡೆ ಉಗ್ರರು ನಡೆಸಿದ ದಾಳಿಯಿಂದಾಗಿ ಯೋಧರು ಸೇರಿದಂತೆ 12 ಮಂದಿ ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇರಾಕ್‌ನ ಕೀರ್‌ಕುಕ್ ನಗರದಲ್ಲಿ ಸಂಭವಿಸಿದ ಸರಣಿ ಕಾರ್ ಬಾಂಬ್ ಸ್ಫೋಟದಿಂದಾಗಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಅಂತೆಯೇ ದಿಯಾಲಾ ಪ್ರಾಂತ್ಯದಲ್ಲಿ ಶಸ್ತ್ರ ಸಜ್ಜಿತ ಇಬ್ಬರು ಉಗ್ರರು ಗುಂಡಿನ ದಾಳಿ ನಡೆಸಿ ಇಬ್ಬರು ಕೌನ್ಸಿಲರ್‌ಗಳನ್ನು ಹತ್ಯೆಗೈದಿದ್ದು, ಬಾಗ್ದಾದ್ ನಗರದಲ್ಲಿ ಮಾಜಿ ಅಧ್ಯಕ್ಷ ಸದ್ದಾಂ ಹುಸೇನ್ ಅವರ ಬೆಂಗಾವಲು ಪಡೆಯಲ್ಲಿದ್ದ ಯೋಧನೋರ್ವನನ್ನು ಮತ್ತು ಆತನ ಪತ್ನಿಯನ್ನು ಗುಂಡು ಹಾರಿಸಿ ಕೊಂದು ಹಾಕಲಾಗಿದೆ.
ಬಾಗ್ದಾದ್‌ನಲ್ಲಿ ಉಗ್ರನೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸರು ಹತರಾಗಿದ್ದಾರೆ. ಅಂತೆಯೇ ಗುಂಡು ಹಾರಿಸುತ್ತಿದ್ದ ಉಗ್ರನನ್ನು ಹೊಡೆದುರುಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದೇ ಬಾಗ್ದಾದ್‌ನಲ್ಲಿ ಕಾರಿನಲ್ಲಿ ಅಳವಡಿಸಲಾಗಿದ್ದ ಕಾರ್ ಬಾಂಬ್ ಸ್ಫೋಟಗೊಂಡು ಓರ್ವ ನಾಗರೀಕ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.