ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬಿಸಿಸಿಐ ಖೆಡ್ಡಾಕ್ಕೆ ಬೀಳದಿರಿ: ಪಿಸಿಬಿಗೆ ಅಬ್ಬಾಸ್ ಎಚ್ಚರಿಕೆ

ಮಕ್ಕಳಿಗೆ ಚಾಕೊಲೇಟ್ ಆಸೆ ತೋರಿಸುವಂತೆ ಈ ಮೂರು ಕ್ರಿಕೆಟ್ ಮಂಡಳಿಗಳು ಪಾಕಿಸ್ತಾನಕ್ಕೆ ಸರಣಿ ಆಯೋಜಿಸುವ ಆಸೆ ತೋರಿಸುತ್ತಿವೆ..

Srinivasa Murthy VN
Updated On : 27 Jan 2014, 6:41 am

ಕರಾಚಿ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿಯಲ್ಲಿ ಪ್ರಭುತ್ವ ಸಾಧಿಸಲು ಬಿಸಿಸಿಐ ಹವಣಿಸುತ್ತಿದ್ದು, ಅದರ ಬಲೆಗೆ ಬೀಳದಿರಿ ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಜಹೀರ್ ಅಬ್ಬಾಸ್ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಎಚ್ಚರಿಕೆ ನೀಡಿದ್ದಾರೆ.

ಕರಾಚಿಯಲ್ಲಿ ಮಾತನಾಡಿದ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಜಹೀರ್ ಅಬ್ಬಾಸ್ ಅವರು, ಐಸಿಸಿಯ ಆಡಳಿತ ಮಂಡಳಿಯಲ್ಲಿ ಬದಲಾವಣೆ ಮಾಡ ಬಯಸಿದ್ದು, ಹೀಗಾಗಿಯೇ ಬಿಸಿಸಿಐ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಕ್ರಿಕೆಟ್ ಸರಣಿ ಆಯೋಜಿಸುವ ಮೂಲಕ ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಓಲೈಸಲು ಪ್ರಯತ್ನಿಸುತ್ತಿದೆ. ಆ ಮೂಲಕ ಐಸಿಸಿ ಆಡಳಿತ ಮಂಡಳಿಯಲ್ಲಿ ಪ್ರಭುತ್ವ ಸಾಧಿಸಲು ಬಿಸಿಸಿಐ ಪರೋಕ್ಷವಾಗಿ ಪಾಕಿಸ್ತಾನದ ಬೆಂಬಲ ಬಯಸುತ್ತಿದೆ ಎಂದು ಹೇಳಿದರು.

ಬಿಸಿಸಿಐನಂತೆಯೇ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗಳೂ ಸಹ ಪಿಸಿಬಿಯ ಓಲೈಕೆ ಮಾಡುತ್ತಿವೆ. ಮಕ್ಕಳಿಗೆ ಚಾಕೊಲೇಟ್ ಆಸೆ ತೋರಿಸುವಂತೆ ಈ ಮೂರು ಕ್ರಿಕೆಟ್ ಮಂಡಳಿಗಳು ಪಾಕಿಸ್ತಾನಕ್ಕೆ ಸರಣಿ ಆಯೋಜಿಸುವ ಆಸೆ ತೋರಿಸುತ್ತಿವೆ. ಹೀಗಾಗಿ ಈ ಮೂರು ಕ್ರಿಕೆಟ್ ಮಂಡಳಿಗಳೊಂದಿಗಿನ ವ್ಯವಹಾರದಲ್ಲಿ ಪಿಸಿಬಿ ಅತ್ಯಂತ ಜಾಗರೂಕವಾಗಿ ಹೆಜ್ಜೆಯನ್ನಿಡಬೇಕಿದೆ ಎಂದು ಅಬ್ಬಾಸ್ ಹೇಳಿದರು.

ಬಿಸಿಸಿಐಗೆ ರಮೀಜ್ ರಾಜಾ ಬೆಂಬಲ
ಇದೇ ವೇಳೆ ಪಾಕಿಸ್ತಾನದ ಮತ್ತೋರ್ವ ಮಾಜಿ ಆಟಗಾರ ರಮೀಜ್ ರಾಜಾ ಅವರು ಬಿಸಿಸಿಐನ ಸರಣಿ ಆಯೋಜನೆಯ ಪ್ರಸ್ತಾಪಕ್ಕೆ ಬೆಂಬಲ ಸೂಚಿಸಿದ್ದು, ಉಭಯ ದೇಶಗಳೊಂದಿಗೆ ಕ್ರಿಕೆಟ್ ಬಾಂಧವ್ಯ ವೃದ್ಧಿಗೆ ಈ ಸರಣಿ ಸಹಾಯಕವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಬಿಸಿಸಿಐನ ಈ ಪ್ರಸ್ತಾಪಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒಪ್ಪಿಗೆ ನೀಡಬೇಕು ಎಂದು ಹೇಳಿದ್ದಾರೆ.

ತನ್ನ ಆಡಳಿತ ಮಂಡಳಿಯಲ್ಲಿ ಬದಲಾವಣೆ ಮಾಡಲು ಮುಂದಾಗಿರುವ ಐಸಿಸಿ, ಈ ಬಗ್ಗೆ ಚರ್ಚಿಸಲು ಇದೇ ಜನವರಿ 28 ಮತ್ತು 29ರಂದು ಸಭೆ ಕರೆದಿದೆ. ದುಬೈನಲ್ಲಿ ನಡೆಯಲಿರುವ ಈ ಸಭೆಯಲ್ಲಿ ಕ್ರಿಕೆಟ್ ಆಡುವ ಎಲ್ಲ ದೇಶಗಳ ಕ್ರಿಕೆಟ್ ಮಂಡಳಿಯ ಸದಸ್ಯರು ಪಾಲ್ಗೊಳ್ಳಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement