ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಶಿಮ್ಲಾದ ಐತಿಹಾಸಿಕ ಕಟ್ಟಡದಲ್ಲಿ ಅಗ್ನಿ ಅವಘಡ

ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿರುವ ಬ್ರಿಟೀಷ್ ಕಾಲದ ಐತಿಹಾಸಿಕ ಕಟ್ಟಡ 'ಗೋರ್ಟನ್ ಕ್ಯಾಸಲ್‌'ನಲ್ಲಿ ಬೆಂಕಿ ಅವಘಡ ಸಂಭವಿಸಿದೆ.

Srinivasa Murthy VN
Updated On : 28 Jan 2014, 1:52 am

ಶಿಮ್ಲಾ: ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿರುವ ಬ್ರಿಟೀಷ್ ಕಾಲದ ಐತಿಹಾಸಿಕ ಕಟ್ಟಡ 'ಗೋರ್ಟನ್ ಕ್ಯಾಸಲ್‌'ನಲ್ಲಿ ಬೆಂಕಿ ಅವಘಡ ಸಂಭವಿಸಿದೆ.

ಗೋರ್ಟನ್ ಕ್ಯಾಸಲ್ ನ 2ನೇ ಮಹಡಿಯಲ್ಲಿ ಇಂದು ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆಗೆ ಈ ಐತಿಹಾಸಿಕ ಕಟ್ಟಡದ 2ನೇ ಮಹಡಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಅಗ್ನಿ ಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಮೂಲಗಳ ಪ್ರಕಾರ ನಿನ್ನೆ ತಡ ರಾತ್ರಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಇಂದು ಮುಂಜಾನೆ ಸುದ್ದಿ ಬೆಳಕಿಗೆ ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಉಪ ಆಯುಕ್ತ ದಿನೇಶ್ ಮಲ್ಹೋತ್ರಾ ಅವರು, 'ಕಟ್ಟಡದ ಬಹುತೇಕ ಭಾಗ ಮರದಿಂದಲೇ ನಿರ್ಮಾಣವಾಗಿರುವುದರಿಂದ ಬೆಂಕಿ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಆದರೂ ಕೂಡ ಬೆಂಕಿ ಕೆಳಮಹಡಿಗಳಿಗೆ ವ್ಯಾಪಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದೇವೆ' ಎಂದು ಹೇಳಿದರು.

1904ರಲ್ಲಿ ಬ್ರಿಟೀಷ್ ಆಡಳಿತಾವಧಿಯಲ್ಲಿ ನಿರ್ಮಾಣಗೊಂಡಿದ್ದ ಈ ಕಟ್ಟಡವನ್ನು ಕಲ್ಲು ಮತ್ತು ಮರದ ಸಾಮಾಗ್ರಿಗಳಿಂದ ನಿರ್ಮಾಣ ಮಾಡಲಾಗಿತ್ತು. ಶಿಮ್ಲಾದ ತುತ್ತ ತುದಿಯಲ್ಲಿ ನಿರ್ಮಾಣ ಮಾಡಿರುವ ಈ ಕಟ್ಟಡ ಪ್ರವಾಸಿ ತಾಣವೂ ಹೌದು. ಪ್ರಸ್ತುತ ಈ ಕಟ್ಟಡವನ್ನು ಅಕೌಂಟೆಂಟ್ ಜನರಲ್ ಕಚೇರಿಯಾಗಿ ಬಳಕೆ ಮಾಡಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement