ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸ್ಟಾಲಿನ್‌ಗೆ ಜೀವ ಬೆದರಿಕೆ ಹಾಕಿಲ್ಲ: ಅಳಗಿರಿ ಅಳಲು

ಸ್ಟಾಲಿನ್ ಗೆ ತಾವು ಜೀವ ಬೆದರಿಕೆ ಹಾಕಿಲ್ಲ. ಅನವಶ್ಯಕವಾಗಿ ನನ್ನ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಕರುಣಾನಿಧಿ ಹಿರಿಯ ಪುತ್ರ ಎಂ.ಕೆ. ಅಳಗಿರಿ ಕಣ್ಣೀರಿಟ್ಟಿದ್ದಾರೆ.

Srinivasa Murthy VN
Updated On : 28 Jan 2014, 8:01 am

ಮದುರೈ: ತಮ್ಮ ಸಹೋದರ ಸ್ಟಾಲಿನ್ ಗೆ ತಾವು ಜೀವ ಬೆದರಿಕೆ ಹಾಕಿಲ್ಲ. ಅನವಶ್ಯಕವಾಗಿ ನನ್ನ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಕರುಣಾನಿಧಿ ಹಿರಿಯ ಪುತ್ರ ಎಂ.ಕೆ. ಅಳಗಿರಿ ಕಣ್ಣೀರಿಟ್ಟಿದ್ದಾರೆ.

ಡಿಎಂಕೆ ಮುಖಂಡ ಸ್ಟಾಲಿನ್ ಅವರಿಗೆ ಜೀವ ಬೆದರಿಕೆ ಹಾಕಿದ ವಿಚಾರ ಅವರ ತಂದೆ ಕರುಣಾನಿಧಿ ಅವರು ಇಂದು ಬಹಿರಂಗ ಪಡಿಸುತ್ತಲೆ ತಮಿಳುನಾಡಿನಾದ್ಯಂತ ಅಳಗಿರಿ ವಿರುದ್ಧ ಡಿಎಂಕೆ ಕಾರ್ಯಕರ್ತರು ಮತ್ತು ಸ್ಟಾಲಿನ್ ಬೆಂಬಲಿಗರು ಪೋಸ್ಟರ್ ಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೆ ಇದೀಗ ಮದುರೈನ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಎಂ.ಕೆ.ಅಳಗಿರಿ ಅವರು, ತಾವು ತಮ್ಮ ಸಹೋದರ ಅಳಗಿರಿ ವಿರುದ್ಧ ಅಂತಹ ಮಾತುಗಳನ್ನು ಆಡಿಯೇ ಇಲ್ಲ. ಆತ 100 ವರ್ಷ ಬದುಕಲಿ. ನಮ್ಮ ತಂದೆ ಕರುಣಾ ನಿಧಿ ಅವರಿಗೆ ಯಾರೋ ಕಿವಿ ತುಂಬುತ್ತಿದ್ದಾರೆ. ದಯವಿಟ್ಟು ಜನತೆ ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.

ಅಳಗಿರಿ ಹತ್ಯೆಗೆ ನಾವು ಶತಃಸಿದ್ದ: ಸ್ಟಾಲಿನ್ ಬೆಂಬಲಿಗರು
ಸ್ಟಾಲಿನ್ ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪಕ್ಕೆ ಗುರಿಯಾಗಿರುವ ಅಳಗಿರಿ ವಿರುದ್ಧ ಸ್ಟಾಲಿನ್ ಬೆಂಬಲಿಗರು ಚೆನ್ನೈನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಳಗಿರಿ ಅವರ ಹತ್ಯೆಗೆ ತಾವು ಶತಃಸಿದ್ಧ. ಇದಕ್ಕಾಗಿ ನಾವು ಆತ್ಮಹತ್ಯಾ ದಳದ ರಚನೆಗೂ ಕೂಡ ಹಿಂದೆ ಮುಂದೆ ನೋಡುವುದಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿಎಂಕೆಯೊಂದಿಗೆ ಡಿಎಂಡಿಕೆ ಮೈತ್ರಿ ವಿಚಾರಕ್ಕೆ ಸಂಬಂಧಪಟ್ಟಂತೆ ಆರಂಭವಾದ ಡಿಎಂಕೆ ಆಂತರಿಕ ಕಲಹ ಇದೀಗ ದಾಯಾದಿ ಕಲಹವಾಗಿ ಮಾರ್ಪಟ್ಟಿದ್ದು, ಅಳಗಿರಿ ಹೇಳಿಕೆಯಿಂದ ಆಕ್ರೋಶಗೊಂಡಿರುವ ಸ್ಟಾಲಿನ್ ಬೆಂಬಲಿಗರು ತಮಿಳುನಾಡಿನ ಹಲವು ನಗರಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement