ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕೇಂದ್ರ ಸಚಿವರ ಮನೆ ಮುಂದೆ ಬಾಂಬ್ ಪತ್ತೆ

ಕೇಂದ್ರ ಸಚಿವ ವಿ.ನಾರಾಯಣ ಸ್ವಾಮಿ ಅವರ ನಿವಾಸದ ಮುಂದೆ ಬಾಂಬ್ ಪತ್ತೆಯಾಗಿದ್ದು, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಅದನ್ನು ನಿಷ್ಕ್ರಿಯಗೊಳಿಸಿದ್ದಾರೆ.

Srinivasa Murthy VN
Updated On : 29 Jan 2014, 2:39 am

ಚೆನ್ನೈ: ಕೇಂದ್ರ ಸಚಿವ ವಿ.ನಾರಾಯಣ ಸ್ವಾಮಿ ಅವರ ಪುದುಚೇರಿ ನಿವಾಸದ ಮುಂದೆ ಬಾಂಬ್ ಪತ್ತೆಯಾಗಿದ್ದು, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಅದನ್ನು ನಿಷ್ಕ್ರಿಯಗೊಳಿಸಿದ್ದಾರೆ.

ತಮಿಳುನಾಡಿನ ಪುದುಚೇರಿಯಲ್ಲಿರುವ ನಾರಾಯಣ ಸ್ವಾಮಿ ಅವರ ನಿವಾಸದ ಎದರು ಪೈಪ್‌ನಲ್ಲಿ ಹುದುಗಿಸಲಾಗಿದ್ದ ಅನುಮಾನಾಸ್ಪದ ವಸ್ತುವನ್ನು ಗಮನಿಸಿದ ಸಚಿವರ ಚಾಲಕ ಕೂಡಲೇ ಅದನ್ನು ಭದ್ರತಾ ಅಧಿಕಾರಿಗಳ ಗಮನಕ್ಕೆ ತಂದಿದ್ದಾನೆ. ಭದ್ರತಾ ಅಧಿಕಾರಿಗಳು ಅದನ್ನು ಪರಿಶೀಲಿಸಿದಾಗ ಅದು ಪೈಪ್ ಬಾಂಬ್ ಎಂಬುದು ಖಚಿತವಾಗಿದೆ. ಕೂಡಲೇ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬಾಂಬ್ ಅನ್ನು ಆಟದ ಮೈದಾನಕ್ಕೆ ಕೊಂಡೊಯ್ದು ಅದನ್ನು ನಿಷ್ಕ್ರಿಯಗೊಳಿಸಿದ್ದಾರೆ.

ಅಲ್ಲದೆ ಸಚಿವರ ನಿವಾಸದ ಸುತ್ತಮುತ್ತ ತೀವ್ರ ಶೋಧಕಾರ್ಯ ನಡೆಸಿದ್ದಾರೆ. ಬಾಂಬ್ ಪತ್ತೆ ವಿಚಾರದ ಕುರಿತು ಮಾತನಾಡಿರುವ ಪುದುಚೇರಿ ಪೊಲೀಸ್ ವರಿಷ್ಠಾಧಿಕಾರಿ ಪಿ.ಕಾಮರಾಜ್ ಅವರು, ಬಾಂಬ್ ಅನ್ನು ನಿಷ್ಕ್ರಿಯಗೊಳಿಸಲಾಗಿದ್ದು, ಸಚಿವರ ನಿವಾಸದ ಸುತ್ತಮುತ್ತ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಅಲ್ಲದೆ ಬಾಂಬ್ ಇಟ್ಟವರಿಗಾಗಿ ತನಿಖೆ ನಡೆಸಲಾಗುತ್ತಿದೆ. ಹೆಚ್ಚುವರಿ ಭದ್ರತೆಗಾಗಿ ಸಚಿವರ ನಿವಾಸದ ಹೋರಭಾಗದಲ್ಲಿ ಸಿಸಿಟಿವಿ ಗಳನ್ನು ಅಳವಡಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement