ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪ್ರಜ್ಞಾವಸ್ಥೆಯತ್ತ ಶೂಮಾಕರ್!

ಸ್ಕೀಯಿಂಗ್ ಅಪಘಾತದಿಂದ ತೀವ್ರವಾಗಿ ಗಾಯಗೊಂಡು ಕೋಮಾ ಸ್ಥಿತಿಗೆ..

ಸ್ಕೀಯಿಂಗ್ ವೇಳೆ ಅಪಘಾತಕ್ಕೊಳಗಾದ ಮೈಕಲ್ ಶೂಮಾಕರ್
Srinivasa Murthy VN
Updated On : 30 Jan 2014, 4:30 am

ನವದೆಹಲಿ: ಕಳೆದ ಡಿಸೆಂಬರ್‌ನಲ್ಲಿ ಸ್ಕೀಯಿಂಗ್ ಅಪಘಾತದಿಂದ ತೀವ್ರವಾಗಿ ಗಾಯಗೊಂಡು ಕೋಮಾ ಸ್ಥಿತಿಗೆ ತಲುಪಿದ್ದ್ದ ಖ್ಯಾತ ಫಾರ್ಮುಲ್ 1 ಚಾಲಕ ಮೈಕಲ್ ಶೂಮಾಕರ್ ಅವರು ಪ್ರಜ್ಞಾವಸ್ಥೆಗೆ ಮರಳಿದ್ದಾರೆ ಎಂದು ತಿಳಿದುಬಂದಿದೆ.

ಫ್ರಾನ್ಸ್‌ನಲ್ಲಿ ಐಸ್ ಸ್ಕೀಯಿಂಗ್ ಮಾಡುತ್ತಿದ್ದ ವೇಳೆ ಅಪಘಾತಕ್ಕೊಳಗಾಗಿ ಕಳೆದ ಒಂದು ತಿಂಗಳಿಂದ ಕೋಮಾ ಸ್ಥಿತಿಯಲ್ಲಿದ್ದ ಶೂಮಾಕರ್‌ಗೆ ಇದೀಗ ಪ್ರಜ್ಞೆ ಬಂದಿದ್ದು, ಚಿಕಿತ್ಸೆಗೆ ಸ್ಪಂಧಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ವಿಚಾರವನ್ನು ಆಸ್ಪತ್ರೆಯ ವೈದ್ಯರಾಗಲಿ ಅಥವಾ ಅವರ ಮ್ಯಾನೇಜರ್ ಆಗಲಿ ಮಾಧ್ಯಮಗಳಿಗೆ ಬಹಿರಂಗಪಡಿಸುತ್ತಿಲ್ಲ. ಈ ಬಗ್ಗೆ ಶೂಮಾಕರ್ ಅವರ ಮ್ಯಾನೇಜರ್ ಸಬೀನೆ ಖೆಮ್ ಅವರನ್ನು ವಿಚಾರಿಸಿದಾಗ, ಶೂಮಾಕರ್ ಅವರಿಗೆ ನೀಡಲಾಗುತ್ತಿರುವ ಚಿಕಿತ್ಸೆ ಮುಂದುವರೆಯುತ್ತಿದೆ ಎಂದಷ್ಟೇ ಹೇಳಿ ಮಾಧ್ಯಮಗಳಿಂದ ನುಣುಚಿಕೊಂಡರು.

ಕಳೆದ ಡಿಸೆಂಬರ್ 29ರಂದು ಫ್ರಾನ್ಸ್ ನಲ್ಲಿ ಸ್ಕೀಯಿಂಗ್ ಮಾಡುತ್ತಿದ್ದ ಮೈಕೆಲ್ ಶೂಮಾಕರ್ ಅವರು ಆಯತಪ್ಪಿ ಕಲ್ಲು ಬಂಡೆಗೆ ಡಿಕ್ಕಿ ಹೊಡೆದಿದ್ದರು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಬಂಡೆಗೆ ಅವರ ತಲೆ ಬಡಿದ ಕಾರಣ ಅವರ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿ ಅವರು ಕೋಮಾ ಸ್ಥಿತಿ ತಲುಪಿದ್ದರು. ಸತತ ಐದು ವಾರಗಳ ಚಿಕಿತ್ಸೆ ಪಡೆದಿದ್ದ ಶೂಮಾಕರ್ ಅವರಿಗೆ ಕಳೆದ ವಾರ ಎರಡು ಪ್ರಮುಖ ಶಸ್ತ್ರ ಚಿಕಿತ್ಸೆ ನಡೆಸಿ ತಲೆಯಲ್ಲಿ ಹೆಪ್ಪುಗಟ್ಟಿದ್ದ ರಕ್ತವನ್ನು ಹೊರ ತಗೆಯಲಾಗಿತ್ತು.

41 ವರ್ಷದ ಶೂಮಾಕರ್ ಫಾರ್ಮುಲಾ 1 ರೇಸ್‌ನ ಚಾಲಕರಾಗಿದ್ದು, ಅತಿ ಹೆಚ್ಚು ರೇಸ್‌ಗಳನ್ನು ಗೆದ್ದ ದಾಖಲೆಯನ್ನು ಇವರು ಹೊಂದಿದ್ದಾರೆ. ಶೂಮಾಕರ್ ಅವರು ಗುಣಮುಖರಾಗಿ ಬರಲೆಂದು ಅವರ ಅಭಿಮಾನಿಗಳು ಹಾರೈಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement