ಬೆಂಗಳೂರಿನಲ್ಲಿ ಭಾರಿ ಬೆಂಕಿ ಅನಾಹುತ, 30 ಕೋಟಿ ನಷ್ಟ
ಆನೇಕಲ್ನಲ್ಲಿ ಬಟ್ಟೆ ಗೋದಾಮಿಗೆ ಬೆಂಕಿ ತಗುಲಿದ್ದು, ಸುಮಾರು 30 ಕೋಟಿ ಮೌಲ್ಯದ ಬಟ್ಟೆ ದಾಸ್ತಾನು ಬೆಂಕಿಗಾಹುತಿಯಾಗಿದೆ.
ಬೆಂಗಳೂರು: ಬೆಂಗಳೂರಿನ ಹೊರವಲಯದ ಆನೇಕಲ್ನಲ್ಲಿ ಬಟ್ಟೆ ಗೋದಾಮಿಗೆ ಬೆಂಕಿ ತಗುಲಿದ್ದು, ಸುಮಾರು 30 ಕೋಟಿ ಮೌಲ್ಯದ ಬಟ್ಟೆ ದಾಸ್ತಾನು ಬೆಂಕಿಗಾಹುತಿಯಾಗಿದೆ.
ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಇಂಡ್ಲವಾಡಿಯಲ್ಲಿರುವ ಎಫ್ಎಸ್ಸಿ ಬಟ್ಟೆ ಗೋದಾಮಿನಲ್ಲಿ ಭಾರಿ ಅಗ್ನಿ ಅನಾಹುತ ಸಂಭವಿಸಿದ್ದು, ಕೋಟ್ಯಂತರ ಮೌಲ್ಯದ ಬಟ್ಟೆಗಳು ಬೆಂಕಿಗೆ ಆಹುತಿಯಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗುಲಿರಬಹುದು ಎಂದು ಶಂಕಿಸಲಾಗುತ್ತಿದೆ. ಸುಮಾರು 6 ಎಕರೆ ಜಾಗದಲ್ಲಿ ನಿರ್ಮಾಣಗೊಂಡಿದ್ದ ಈ ಗೋದಾಮಿನಲ್ಲಿ ವಿವಿಧ ಕಂಪನಿಗಳಿಗೆ ಸೇರಿದ ಕೋಟ್ಯಾಂತರ ಮೌಲ್ಯದ ಬಟ್ಟೆಗಳನ್ನು ಸಂಗ್ರಹಿಸಡಲಾಗಿತ್ತು. ಬಿಗ್ ಬಜಾರ್, ಮೆಟ್ರೋ ನಂತಹ ವಿವಿಧ ಶಾಪಿಂಗ್ ಮಾಲ್ಗಳಿಗೆ ಇಲ್ಲಿಂದಲೇ ಬಟ್ಟೆಗಳನ್ನು ರವಾನಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ ಗೋದಾಮಿನಲ್ಲಿ ಸುಮಾರು 30 ಕೋಟಿ ಮೌಲ್ಯದ ಬಟ್ಟೆಗಳನ್ನು ಸಂಗ್ರಹಿಸಡಲಾಗಿತ್ತು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ 10ಕ್ಕೂ ಹೆಚ್ಚು ಅಗ್ನಿ ಶಾಮಕ ವಾಹನಗಳನ್ನು ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಆನೇಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.