ರಣಜಿ ಫೈನಲ್: ವಿಕೆಟ್ ನಷ್ಟವಿಲ್ಲದೆ ಕರ್ನಾಟಕ 230 ರನ್
ರಣಜಿ ಕ್ರಿಕೆಟ್ ಫೈನಲ್ ಪಂದ್ಯದ 2ನೇ ದಿನದಾಟ ಅಂತ್ಯಗೊಂಡಿದ್ದು, ಕರ್ನಾಟಕ ತಂಡ ವಿಕೆಟ್ ನಷ್ಟವಿಲ್ಲದೆ 230ರನ್ ಗಳಿಸಿದೆ.
ಹೈದರಾಬಾದ್: ರಣಜಿ ಕ್ರಿಕೆಟ್ ಫೈನಲ್ ಪಂದ್ಯದ 2ನೇ ದಿನದಾಟ ಅಂತ್ಯಗೊಂಡಿದ್ದು, ಕರ್ನಾಟಕ ತಂಡ ವಿಕೆಟ್ ನಷ್ಟವಿಲ್ಲದೆ 230ರನ್ ಗಳಿಸಿದೆ.
ಮುತ್ತಿನ ನಗರಿ ಹೈದರಾಬಾದಿನಲ್ಲಿ ನಡೆಯುತ್ತಿರುವ ರಣಜಿ ಕ್ರಿಕೆಟ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡು ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಕರ್ನಾಟಕ ತಂಡ ಪ್ರಥಮ ಇನ್ನಿಂಗ್ಸ್ ಮುನ್ನಡೆಯತ್ತ ದಾಪುಗಾಲಿರಿಸಿದೆ. ಆರಂಭಿಕ ಆಟಗಾರ ಕೆಎಲ್ ರಾಹುಲ್ ಮತ್ತು ಗಣೇಶ್ ಸತೀಶ್ ಅವರ ಜುಗಲ್ ಬಂದಿ ಮಹಾರಾಷ್ಟ್ರ ಬೌಲರ್‌ಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಪ್ರಥಮ ಇನ್ನಿಂಗ್ಸ್ ನಲ್ಲಿ ಕರ್ನಾಟಕದ ಪರ ಗಣೇಶ್ ಸತೀಶ್ ಅವರು ತಾಳ್ಮೆಯ ಆಟವಾಡಿ ಅಮೋಘ ಶತಕ ದಾಖಲಿಸಿದ್ದಾರೆ. ಒಟ್ಟು 117 ರನ್ ಗಳಿಸಿರುವ ಅವರು ನಾಳೆಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಅಂತೆಯೇ ಗಣೇಶ್‌ಗೆ ಉತ್ತಮ ಸಾಥ್ ನೀಡುತ್ತಿರುವ ರಾಹುಲ್ ಶತಕದ ಅಂಚಿನಲ್ಲಿದ್ದು, ಅವರು 94 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಕರ್ನಾಟಕದ ಎಚ್ಚರಿಕೆಯ ಬ್ಯಾಟಿಂಗ್ ವಿರುದ್ಧ ಮಹಾರಾಷ್ಟ್ರ ಬೌಲರ್‌ಗಳು ವಿಕೆಟ್ ಪಡೆಯಲು ಪರದಾಡಿದರು.
ಕರ್ನಾಟಕ ಇನ್ನೂ 75 ರನ್‌ಗಳ ಹಿನ್ನಡೆಯಲ್ಲಿದ್ದು, ನಾಳೆ ವೇಗವಾಗಿ ರನ್‌ಗಳನ್ನು ಕದಿಯಬೇಕಿದೆ. ಆ ಮೂಲಕ ಇನ್ನಿಂಗ್ಸ್ ಮುನ್ನಡೆ ಸಾಧಿಸಿ ಮಹಾರಾಷ್ಟ್ರ ತಂಡವನ್ನು ಒತ್ತಡಕ್ಕೆ ಸಿಲುಕಿಸಬೇಕಿದೆ.