ಕೊನೆಯ ಪಂದ್ಯದಲ್ಲಿಯೂ ಮುಗ್ಗರಿಸಿದ ಭಾರತ
ಸರಣಿಯ ಐದನೇ ಮತ್ತು ಕೊನೆಯ ಪಂದ್ಯದಲ್ಲಿಯೂ ಭಾರತ ನ್ಯೂಜಿಲೆಂಡ್ ವಿರುದ್ಧ 87 ರನ್ಗಳಿಂದ ಸೋತು ಶರಣಾಗಿದೆ.
ವಿಲ್ಲಿಂಗ್ಟನ್: ಸರಣಿಯ ಐದನೇ ಮತ್ತು ಕೊನೆಯ ಪಂದ್ಯದಲ್ಲಿಯೂ ಭಾರತ ನ್ಯೂಜಿಲೆಂಡ್ ವಿರುದ್ಧ 87 ರನ್ಗಳಿಂದ ಸೋತು ಶರಣಾಗಿದೆ.
ಇಂದು ವಿಲ್ಲಿಂಗ್ ಟನ್ ನಲ್ಲಿ ನಡೆದ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 87 ರನ್ ಗಳಿಂದ ಸೋಲು ಕಂಡಿದೆ. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ನಡೆಸುವ ಅವಕಾಶ ಪಡೆದ ನ್ಯೂಜಿಲೆಂಡ್ ತಮಗೆ ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿತು. ರಾಸ್ ಟೇಲರ್ (102 ರನ್, 106 ಎಸೆತ) ಮತ್ತು ಕೇನ್ ವಿಲಿಯಮ್ಸನ್(88 ರನ್, 91 ಎಸೆತ) ಅವರ ಅಮೋಘ ಆಟದ ನೆರವಿನಿಂದ ನ್ಯೂಜಿಲೆಂಡ್ 303ರನ್ ಗಳನ್ನು ಕಲೆಹಾಕಿ, ಭಾರತಕ್ಕೆ ಗೆಲ್ಲಲು 304ರನ್ ಗಳ ಬೃಹತ್ ಗುರಿಯನ್ನು ನೀಡಿತು.
ನ್ಯೂಜಿಲೆಂಡ್ ನೀಡಿದ ಬೃಹತ್ ಗುರಿಯ ಬೆನ್ನು ಹತ್ತಿದ ಭಾರತ ಕೇವಲ 216ರನ್ಗಳಿಗೆ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡು ಕಿವೀಸ್ಗೆ ಶರಣಾಯಿತು. ವಿರಾಟ್ ಕೊಹ್ಲಿ (82 ರನ್,78 ಎಸೆತ) ಮತ್ತು ನಾಯಕ ಧೋನಿ (47 ರನ್, 79 ಎಸೆತ)ಯನ್ನು ಹೊರತು ಪಡಿಸಿದರೆ ತಂಡದ ಯಾವೊಬ್ಬ ಆಟಗಾರನೂ ಕೂಡ ನ್ಯೂಜಿಲೆಂಡ್ ಬೌಲರ್ಗಳ ವಿರುದ್ಧ ಪ್ರತಿರೋಧ ತೋರುವ ಪ್ರಯತ್ನ ಮಾಡಲಿಲ್ಲ. ನ್ಯೂಜಿಲೆಂಡ್ ಪರ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ ಎಂ.ಹೆನ್ರಿ ಅವರು 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು. ಅವರಿಗೆ ಮಿಲ್ಸ್ ಮತ್ತು ವಿಲಿಯಮ್ಸನ್ ಅವರು ತಲಾ 2 ವಿಕೆಟ್ ಪಡೆಯುವ ಮೂಲಕ ಉತ್ತಮ ಸಾಥ್ ನೀಡಿದರು.
ಐದು ಪಂದ್ಯಗಳ ಸರಣಿಯಲ್ಲಿ ಭಾರತ ಒಂದೂ ಪಂದ್ಯವನ್ನು ಗೆಲ್ಲದೇ ಮುಖಭಂಗ ಅನುಭವಿಸಿದರೆ, 4 ಪಂದ್ಯಗಳನ್ನು ಗೆಲ್ಲುವ ಮೂಲಕ ನ್ಯೂಜಿಲೆಂಡ್ ತಂಡ ರ್ಯಾಂಕಿಂಗ್ ಪಟ್ಟಿಯಲ್ಲ್ತಿನ್ನ ಸ್ಥಾನವನ್ನು ಉತ್ತಮಪಡಿಸಿಕೊಂಡಿದೆ.
ಸಂಕ್ಷಿಪ್ತ ಸ್ಕೋರ್ ವಿವರ
ಟಾಸ್-ಭಾರತ (ಫೀಲ್ಡಿಂಗ್ ಆಯ್ಕೆ)
ನ್ಯೂಜಿಲೆಂಡ್
ವಿಲಿಯಮ್ಸನ್-88 ರನ್, 91 ಎಸೆತ
ರಾಸ್ ಟೇಲರ್-102 ರನ್, 106 ಎಸೆತ
ಬೌಲಿಂಗ್
ಮಹಮದ್ ಶಮಿ-10 ಓವರ್, 61 ರನ್, 1 ವಿಕೆಟ್
ಬಿ.ಕುಮಾರ್-8 ಓವರ್, 48 ರನ್, 1 ವಿಕೆಟ್
ವಿ.ಆರನ್-10 ಓವರ್, 60 ರನ್, 2 ವಿಕೆಟ್
ವಿ.ಕೊಹ್ಲಿ-7 ಓವರ್, 36 ರನ್, 1 ವಿಕೆಟ್
ಭಾರತ
ವಿರಾಟ್ ಕೊಹ್ಲಿ-82 ರನ್,78 ಎಸೆತ
ಎಂ.ಧೋನಿ-47 ರನ್, 79 ಎಸೆತ
ಎ.ರಾಯುಡು-20 ರನ್, 40 ಎಸೆತ
ಬೌಲಿಂಗ್
ಕೆ.ಮೈಲ್ಸ್-10 ಓವರ್, 35 ರನ್, 2 ವಿಕೆಟ್
ಎಂ.ಹೆನ್ರಿ-10 ಓವರ್, 38 ರನ್, 4 ವಿಕೆಟ್
ಕೆ.ವಿಲಿಯಮ್ಸನ್-4 ಓವರ್, 19 ರನ್, 2 ವಿಕೆಟ್