ರಣಜಿ ಫೈನಲ್: 3ನೇ ದಿನದಾಟದಂತ್ಯಕ್ಕೆ ಕರ್ನಾಟಕ 474/7
ರಣಜಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಮೇಲುಗೈ ಸಾಧಿಸಿದ್ದು, 3ನೇ ದಿನದಾಟದ ಅಂತ್ಯಕ್ಕೆ ಮೊದಲ ಇನ್ನಿಂಗ್ಸ್‌ನಲ್ಲಿ 7ವಿಕೆಟ್ ನಷ್ಟಕ್ಕೆ 474 ರನ್ ಗಳಿಸಿದೆ.
ಹೈದರಾಬಾದ್: ರಣಜಿ ಕ್ರಿಕೆಟ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಮೇಲುಗೈ ಸಾಧಿಸಿದ್ದು, 3ನೇ ದಿನದಾಟದ ಅಂತ್ಯಕ್ಕೆ ಮೊದಲ ಇನ್ನಿಂಗ್ಸ್‌ನಲ್ಲಿ 7ವಿಕೆಟ್ ನಷ್ಟಕ್ಕೆ 474 ರನ್ ಗಳಿಸಿದೆ.
ರಣಜಿ ಫೈನಲ್ ಪಂದ್ಯದ 3ನೇ ದಿನವಾದ ಇಂದು ಬ್ಯಾಟಿಂಗ್ ಮುಂದುವರೆಸಿದ ಕರ್ನಾಟಕ ತಂಡದ ಆಟಗಾರರು, ಮಹಾರಾಷ್ಟ್ರ ಬೌಲರ್‌ಗಳ ಮೇಲೆ ಸವಾರಿ ಮಾಡಿದ್ದಾರೆ. ನಿನ್ನೆ ವಿಕೆಟ್ ನಷ್ಟ ವಿಲ್ಲದೆ 230ರನ್ ಗಳಿಸಿದ್ದ ಕರ್ನಾಟಕ ಇಂದು 3ನೇ ದಿನದಾಟ ಅಂತ್ಯದ ವೇಳೆಗೆ 7 ವಿಕೆಟ್ ನಷ್ಟಕ್ಕೆ 474ರನ್ ಗಳನ್ನು ಕಲೆಹಾಕಿದೆ. ಆ ಮೂಲಕ 169ರನ್‌ಗಳ ಮುನ್ನಡೆ ಪಡೆದುಕೊಂಡಿದೆ. ನಿನ್ನೆ ಶತಕ ಭಾರಿಸಿದ್ದ ಗಣೇಶ್ ಸತೀಶ್ ಅವರು 117ರನ್ ಗಳಿಸಿ ಖುರಾನ ಅವರಿಗೆ ಕ್ಲೀನ್ ಬೋಲ್ಡ್ ಆದರು. ಅವರಿಗೆ ಉತ್ತಮ ಸಾಥ್ ನೀಡುತ್ತಿದ್ದ ರಾಹುಲ್ ಅವರು 131ರನ್ ಗಳಿಸಿ ಔಟ್ ಆದರು.
ನಿನ್ನೆ ಗಾಯಗೊಂಡು ಪೆವಿಲಿಯನ್ ಮರಳಿದ್ದ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ ಅವರು ಚೇತರಿಸಿಕೊಂಡು ಇಂದು ಬ್ಯಾಟಿಂಗ್ ನಡೆಸಿ ಅಮೂಲ್ಯ 72 ರನ್‌ಗಳ ಕಾಣಿಕೆ ನೀಡಿದರು. 72 ರನ್‌ಗಳಿಸಿದ್ದ ಉತ್ತಪ್ಪ ಅವರು ಮುಂಡೆ ಬೌಲಿಂಗ್ ನಲ್ಲಿ ಔಟ್ ಆದರು. ನಂತರ ಮನೀಶ್ ಪಾಂಡೆ ಅವರು 36 ರನ್‌ಗಳಿಸಿ ಫಲ್ಹಾ ಅವರ ಬೌಲಿಂಗ್‌ನಲ್ಲಿ ಎಲ್‌ಬಿಗೆ ಬಲಿಯಾಗಿ ಹೊರನಡೆದರು.
ನಿನ್ನೆ ಕರ್ನಾಟಕದ ಉತ್ತಮ ಬ್ಯಾಟಿಂಗ್ ಎದುರು ವಿಕೆಟ್ ಪಡೆಯಲು ಪರದಾಡುತ್ತಿದ್ದ ಮಹಾರಾಷ್ಟ್ರ ಬೌಲರ್‌ಗಳು ಇಂದು ಪ್ರಮುಖ ಐದು ವಿಕೆಟ್‌ಗಳನ್ನು ಕಬಳಿಸುವುದರಲ್ಲಿ ಯಶಸ್ವಿಯಾದರು. ಮಹಾರಾಷ್ಟ್ರದ ಪರ ಎ.ಫಲ್ಹಾ 3 ವಿಕೆಟ್ ಕಬಳಿಸಿದ್ದು, ಸಿ.ಖುರಾನಾ ಮತ್ತು ಎಸ್ ಮುಂಡೆ ಅವರು ತಲಾ 2 ವಿಕೆಟ್ ಪಡೆಯುವ ಮೂಲಕ ಮಹಾರಾಷ್ಟ್ರ ತಂಡ ಮತ್ತೆ ಪಂದ್ಯದಲ್ಲಿ ಹಿಡಿತ ಹರ ಸಾಹಸ ಪಡುತ್ತಿದೆ.