ಸಬ್ಸಿಡಿ ಸಹಿತ ಗ್ಯಾಸ್ ಸಿಲಿಂಡರ್ ದರ ಇಳಿಕೆ
ಸಬ್ಸಿಡಿ ಸಹಿತ ಗ್ಯಾಸ್ ಸಿಲಿಂಡರ್ ಗಳ ಮೇಲಿನ ದರದಲ್ಲಿ 107 ರುಪಾಯಿಗಳನ್ನು ಇಳಿಕೆ ಮಾಡಲಾಗಿದೆ.
ನವದೆಹಲಿ: ಸಬ್ಸಿಡಿ ಸಹಿತ ಗ್ಯಾಸ್ ಸಿಲಿಂಡರ್ ಗಳ ಮೇಲಿನ ದರದಲ್ಲಿ 107 ರುಪಾಯಿಗಳನ್ನು ಇಳಿಕೆ ಮಾಡಲಾಗಿದೆ.
ಗ್ಯಾಸ್ ಬಳಕೆದಾರರಿಗೆ ಕೇಂದ್ರ ಸರ್ಕಾರ ತಾತ್ಕಾಲಿಕ ಸಿಹಿ ಸುದ್ದಿ ನೀಡಿದ್ದು, ಸಬ್ಸಿಡಿ ಸಹಿತ ಗ್ಯಾಸ್ ಸಿಲಿಂಡರ್ಗಳ ಮೇಲಿನ ದರದಲ್ಲಿ 107 ರುಪಾಯಿ ಇಳಿಕೆ ಮಾಡಿದೆ. ಇತ್ತೀಚಗಷ್ಟೇ ಸಬ್ಸಿಡಿ ಸಹಿತ ಗ್ಯಾಸ್ ಸಿಲಿಂಡರ್ಗಳ ಮೇಲಿನ ಮಿತಿಯನ್ನು ಏರಿಸಿದ್ದ ಕೇಂದ್ರ ಸರ್ಕಾರ ಇದೀಗ ಮತ್ತೆ ಪ್ರತಿ ಸಬ್ಸಿಡಿ ಸಹಿತ ಸಿಲಿಂಡರ್ ದರದಲ್ಲಿ 107 ರುಪಾಯಿಗಳನ್ನು ಕಡಿತಗೊಳಿಸಿದೆ.
ನಾಳೆಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದ್ದು, 3 ತಿಂಗಳ ಅವಧಿಯಲ್ಲಿ ಮಾತ್ರ ಈ ದರ ಜಾರಿಯಲ್ಲಿರುತ್ತದೆ. ಅಂದರೆ 2014ರ ಫೆಬ್ರವರಿ 1ರಿಂದ ಏಪ್ರಿಲ್ 30ರವರೆಗೆ ಮಾತ್ರ ಈ ನೂತನ ಜಾರಿಯಲ್ಲಿರುತ್ತದೆ. ಅನಂತರ ಮತ್ತೊಂದು ನೂತನ ದರ ಜಾರಿಯಾಗಲಿದೆ.