ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕುತೂಹಲಕರ ಘಟ್ಟದಲ್ಲಿ ರಣಜಿ ಫೈನಲ್, ಮಹಾ 227/4

ಪ್ರಸಕ್ತ ಸಾಲಿನ ರಣಜಿ ಕ್ರಿಕೆಟ್ ಟ್ರೋಫಿ ಫೈನಲ್ ಪಂದ್ಯದ ಕುತೂಹಲಕರ ಘಟ್ಟ ತಲುಪಿದ್ದು, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮಹಾರಾಷ್ಟ್ರ ತಂಡ 4 ವಿಕೆಟ್ ನಷ್ಟಕ್ಕೆ 227ರನ್‌ಗಳಿಸಿದೆ.

Srinivasa Murthy VN
Updated On : 1 Feb 2014, 4:11 am

ಹೈದರಾಬಾದ್: ಪ್ರಸಕ್ತ ಸಾಲಿನ ರಣಜಿ ಕ್ರಿಕೆಟ್ ಟ್ರೋಫಿ ಫೈನಲ್ ಪಂದ್ಯ ಕುತೂಹಲಕರ ಘಟ್ಟ ತಲುಪಿದ್ದು, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮಹಾರಾಷ್ಟ್ರ ತಂಡ 4 ವಿಕೆಟ್ ನಷ್ಟಕ್ಕೆ 227ರನ್‌ಗಳಿಸಿದೆ.

ಪಂದ್ಯದ 4ನೇ ದಿನದಾಟ ಮುಂದುವರೆಸಿದ ಕರ್ನಾಟಕ ತಂಡ ಇಂದು 515ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ಮಹಾರಾಷ್ಟ್ರ ವಿರುದ್ಧ 210ರನ್ ಗಳ ಮುನ್ನಡೆ ಪಡೆಯಿತು. ಮೊದಲ ಇನ್ನಿಂಗ್ಸ್ ಹಿನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿರುವ ಮಹಾರಾಷ್ಟ್ರ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು 224ರನ್ ಕಲೆಹಾಕಿದೆ. ಅಲ್ಲದೆ ಕರ್ನಾಟಕ ವಿರುದ್ಧ 17 ರನ್‌ಗಳ ಮುನ್ನಡೆ ಪಡೆದಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಮಹಾರಾಷ್ಟ್ರ ದಾಂಡಿಗರನ್ನು ಇನ್ನಿಲ್ಲದಂತೆ ಕಾಡಿದ್ದ ವಿನಯ್ ಬಳಗ ಅದೇ ಒಗ್ಗಟ್ಟಿನ ಬಲವನ್ನು 2ನೇ ಇನ್ನಿಂಗ್ಸ್ ನಲ್ಲಿಯೂ ಮುಂದುವರೆಸಿದ್ದು, ನಾಯಕ ವಿನಯ್ ಕುಮಾರ್ ಮತ್ತು ಎಸ್.ಗೋಪಾಲ್ ಅವರು ತಲಾ 2 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿರುವ ಮಹಾರಾಷ್ಟ್ರಕ್ಕೆ ಜಾಧವ್ (91 ರನ್) ಅವರು ಆಸರೆಯಾಗಿದ್ದು, ಅವರಿಗೆ ಎಸ್ ಖುರಾನಾ (24 ರನ್) ಅವರು ಉತ್ತಮ ಸಾಥ್ ನೀಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement