ಮಾದಕ ವಸ್ತು ಅಕ್ರಮ ಸಾಗಣೆ: ದ.ಆಫ್ರಿಕಾದ ಮಹಿಳೆ ಬಂಧನ
13ಕೋಟಿ ಮೌಲ್ಯದ Methaqualone..
ನವದೆಹಲಿ: ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ದಕ್ಷಿಣ ಆಫ್ರಿಕಾ ಮೂಲದ ಮಹಿಳೆಯನ್ನು ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಬಂಧಿಸಿದ್ದಾರೆ.
ನವದೆಹಲಿಯಿಂದ ನೈರೋಬಿ ಮಾರ್ಗವಾಗಿ ಆಫ್ರಿಕಾ ದೇಶಕ್ಕೆ ಸಾಗಿಸಲಾಗುತ್ತಿದ್ದ ಸುಮಾರು 13ಕೋಟಿ ರು. ಮೌಲ್ಯದ 16 ಕೆ.ಜಿ. Methaqualone ಎಂಬ ಮಾದಕ ಔಷದಿಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿಯೇ ತಡೆದಿರುವ ಭದ್ರತಾ ಅಧಿಕಾರಿಗಳು ಅದನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಬಂಧಿತ ಮಹಿಳೆಯನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.Methaqualone ಒಂದು ಲೈಂಗಿಕ ಉತ್ತೇಜನ ಔಷಧಿಯಾಗಿದ್ದು, ಭಾರತದಲ್ಲಿ ಇದರ ಮುಕ್ತ ಮಾರಾಟಕ್ಕೆ ನಿಷೇಧ ಹೇರಲಾಗಿದೆ.
ಇಂತಹುದೇ ಮತ್ತೊಂದು ಪ್ರಕರಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟದಲ್ಲಿ ತೊಡಗಿದ್ದ ದೆಹಲಿ ಮೂಲದ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡಿರುವ ಭದ್ರತಾ ಅಧಿಕಾರಿಗಳು ಅವರಿಂದ ಸುಮಾರು 64 ಲಕ್ಷ ಮೌಲ್ಯದ 2.5 ಕೆಜಿ ತೂಕದ ಚಿನ್ನದ ತಂತಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಚಿನ್ನವನ್ನು ದುಬೈಯಿಂದ ಭಾರತಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ.