ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮುಜಾಫರನಗರ ನಿರಾಶ್ರಿತ ಶಿಬಿರದಲ್ಲಿರುವವರೆಲ್ಲರೂ ಭಿಕ್ಷುಕರು..!

ಮುಜಾಫರನಗರದ ನಿರಾಶ್ರಿತ ಶಿಬಿರಗಳಲ್ಲಿ ಇರುವವರು ನಿರಾಶ್ರಿತರಲ್ಲ. ಬದಲಿಗೆ ಅವರು ವೃತ್ತಿಪರ ಭಿಕ್ಷುಕರು ಎಂದು ಸಮಾಜವಾದಿ ಪಕ್ಷದ ಮುಖಂಡ ಅತೀಕ್ ಅಹಮದ್ ಹೇಳಿದ್ದಾರೆ.

Srinivasa Murthy VN
Updated On : 1 Feb 2014, 6:47 am

ಲಖನೌ: ಮುಜಾಫರನಗರದ ನಿರಾಶ್ರಿತ ಶಿಬಿರಗಳಲ್ಲಿ ಇರುವವರು ನಿರಾಶ್ರಿತರಲ್ಲ. ಬದಲಿಗೆ ಅವರು ವೃತ್ತಿಪರ ಭಿಕ್ಷುಕರು ಎಂದು ಸಮಾಜವಾದಿ ಪಕ್ಷದ ಮುಖಂಡ ಅತೀಕ್ ಅಹಮದ್ ಹೇಳಿದ್ದಾರೆ.

ಮುಜಾಫರನಗರದ ನಿರಾಶ್ರಿತ ಶಿಬಿರ ಪದೇ ಪದೇ ಉತ್ತರ ಪ್ರದೇಶ ರಾಜಕಾರಣಿಗಳ ರಾಜಕೀಯದ ವಸ್ತುವಾಗುತ್ತಿದ್ದು, ಇದೀಗ ಮತ್ತೆ ಅದು ಸುದ್ದಿಗೆ ಗ್ರಾಸವಾಗಿದೆ. ಈ ಭಾರಿ ಆ ನಿರಾಶ್ರಿತ ಶಿಬಿರದಲ್ಲಿರುವ ನಿರಾಶ್ರಿತರನ್ನು ಸಮಾಜವಾದಿ ಪಕ್ಷದ ಮುಖಂಡ ಅತೀಕ್ ಮಹಮದ್ ಅವರು ವೃತ್ತಿಪರ ಭಿಕ್ಷುಕರು ಎಂದು ಕರೆಯುವ ಮೂಲಕ ಮತ್ತೆ ಅದನ್ನು ಸುದ್ದಿಗೆ ತಂದಿದ್ದಾರೆ.

ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಮುಜಾಫರನಗರ ನಿರಾಶ್ರಿತ ಶಿಬಿರದಲ್ಲಿರುವವರೆಲ್ಲರೂ ವೃತ್ತಿ ಪರ ಭಿಕ್ಷುಕರಾಗಿದ್ದಾರೆ. ಮೂಲ ನಿರಾಶ್ರಿತರಿಗೆ ಸರ್ಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಿದೆ. ಅಲ್ಲದೆ ಪ್ರತೀ ಕುಟುಂಬಕ್ಕೆ ರಾಜ್ಯ ಸರ್ಕಾರ 15 ಲಕ್ಷ ಸಹಾಯ ಧನ ನೀಡಿ, ವಿವಿಧ ಕ್ಷೇತ್ರಗಳಲ್ಲಿ ಅವರಿಗೆ ಕೆಲಸ ನೀಡಿದೆ' ಎಂದು ಹೇಳಿದ್ದಾರೆ. ಅತೀಕ್ ಮಹಮದ್ ಅವರ ಈ ಹೇಳಿಕೆ ಇದೀಗ ವಿವಾದಕ್ಕೆ ಗ್ರಾಸವಾಗಿದ್ದು, ಎಸ್‌ಪಿ ಮುಖಂಡನ ಹೇಳಿಕೆಗೆ ದೇಶಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.

ಈ ಹಿಂದೆ ಇದೇ ನಿರಾಶ್ರಿತ ಶಿಬಿರದಲ್ಲಿನ ನಿರಾಶ್ರಿತರ ಕುರಿತು ಹೇಳಿಕೆ ನೀಡಿದ್ದ ಎಸ್‌ಪಿ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರು 'ನಿರಾಶ್ರಿತರನ್ನು ವಿರೋಧ ಪಕ್ಷಗಳ ಕಾರ್ಯಕರ್ತರು' ಎಂದು ಹೇಳಿದ್ದರು. ಅಂತೆಯೇ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅನಿಲ್ ಗುಪ್ತಾ ಅವರು ನಿರಾಶ್ರಿತ ಶಿಬಿರದಲ್ಲಿನ ಮಕ್ಕಳ ಸಾವಿನ ಕುರಿತು ಮಾತನಾಡಿ ವಿವಾದಕ್ಕೆ ಗುರಿಯಾಗಿದ್ದರು. 'ಶಿಬಿರದಲ್ಲಿನ ಮಕ್ಕಳು ಶೀತಕ್ಕೆ ಸಾಯುತ್ತಿದ್ದಾರೆ' ಎಂಬ ಗುಪ್ತಾ ಅವರ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.

ಇದೀಗ ಇದೇ ನಿರಾಶ್ರಿತ ಶಿಬಿರದ ಬಗ್ಗೆ ಮಾಫಿಯಾದಿಂದ ರಾಜಕಾರಣಕ್ಕೆ ಬಂದಿರುವ ಅತೀಕ್ ಮಹಮದ್ ಹೇಳಿಕೆ ನೀಡುವ ಮೂಲಕ ವಿವಾದದ ಕೇಂದ್ರವಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement