ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕುಲಪತಿ ನೇಮಕದಲ್ಲಿ ಅವ್ಯವಹಾರ ಆರೋಪ

Srinivasa Murthy VN
Updated On : 2 Jul 2014, 4:43 am

ಬೆಂಗಳೂರು: ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿಗಳ ನೇಮಕ ಕಾನೂನು ಬಾಹಿರ ಎಂದು ಶಿಕ್ಷಣ ಸಂಶೋಧನಾ ಒಕ್ಕೂಟದ ಅಧ್ಯಕ್ಷ ಡಾ. ಜೈಪ್ರಕಾಶ್ ಪಾಟೀಲ್ ಅವರು ಆರೋಪಿಸಿದ್ದಾರೆ.

ಈ ಕುರಿತು ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಡಾ. ಜೈಪ್ರಕಾಶ್ ಪಾಟೀಲ್ ಅವರು ಇತ್ತೀಚೆಗೆ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿಶ್ವವಿದ್ಯಾಲಯದಲ್ಲಿ ಡಾ.ಡಿ.ಎಲ್.ಮಹೇಶ್ವರನನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆದರೆ ಅವರು ಪ್ರಾಧ್ಯಾಪಕ ಅಥವಾ ತತ್ಸಮಾನ ಹುದ್ದೆಯಲ್ಲಿ 10 ವರ್ಷ ಸೇವೆ ಸಲ್ಲಿಸದೇ ಇರುವುದರಿಂದ ಕುಲಪತಿಗಳ ಹುದ್ದೆಗೆ ಅರ್ಹರಲ್ಲ ಎಂದು ತಿಳಿಸಿದ್ದಾರೆ.

ಅಲ್ಲದೆ ಈ ಕೂಡಲೇ ಕುಲಪತಿಗಳಾಗಿರುವ ಡಾ.ಎಲ್. ಮಹೇಶ್ವರ ಅವರ ಕುಲಪತಿ ಹುದ್ದೆಯನ್ನು ಸರ್ಕಾರ ಅಮಾನತುಗೊಳಿಸದಿದ್ದರೆ ನ್ಯಾಯಾಂಗದ ಮೊರೆ ಹೋಗಬೇಕಾಗುತ್ತದೆ ಎಂದು ಜೈ ಪ್ರಕಾಶ್ ಪಾಟೀಲ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement