ಜೀತ ಪದ್ದತಿ ವಿರುದ್ಧ ಬೃಹತ್ ಸಮಾವೇಶ
ಬೆಂಗಳೂರು: ಜೀತ ಪದ್ದತಿ ತೊಲಗಿಸಿ ಗುತ್ತಿಗೆಯಾಧಾರಿತ ಎಲ್ಲಾ ಪೌರ ಸೇವಾ ನೌಕರರನ್ನು ಖಾಯಂಗೊಳಿಸಿ, ಗುತ್ತಿಗೆ ಪದ್ದತಿಯನ್ನು ರದ್ದುಗೊಳಿಸುವ ಸಲುವಾಗಿ ಕರ್ನಾಟಕ ರಾಜ್ಯ ಪೌರ ಕಾರ್ಮಿಕರ ಸಂಘ ಬೃಹತ್ ಸಮಾವೇಶವನ್ನು ಏರ್ಪಡಿಸಿದೆ. ಜುಲೈ 12 ರಂದು ನಡೆಯಲಿರುವ ಈ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯರವರು ಉದ್ಘಾಟಿಸಲಿದ್ದು, ಬೆಳಿಗ್ಗೆ 11 ಘಂಟೆಗೆ ಮಲ್ಲೇಶ್ವರಂ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ.