ವಿದ್ಯೇಶ ತೀರ್ಥ ಶ್ರೀಪಾದರ 60 ನೇ ವರ್ಧಂತ್ಯುತ್ಸವ
ಬೆಂಗಳೂರು: ಪೇಜಾವರ ಮಠಾಧೀಶರಾದ ವಿಶ್ವೇಶ್ವರ ತೀರ್ಥ ಶ್ರೀ ಪಾದರ ಗುರುಗಳಾದ ವಿದ್ಯೇಶ ತೀರ್ಥ ಶ್ರೀಪಾದ ಅವರ 60 ನೇ ವರ್ಧಂತ್ಯುತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಪೇಜಾವರ ಶ್ರೀ ಪಾದರ ನೇತೃತ್ವದಲ್ಲಿ ಷಷ್ಟ್ಯಬ್ದ ಮಹೋತ್ಸವವನ್ನು ವಿದ್ಯಾಪೀಠದ ಕತ್ರಿಗುಪ್ಪೆಯಲ್ಲಿ ಏರ್ಪಡಿಸಲಾಗಿದೆ. ಜುಲೈ 4 ರಿಂದ 6 ರವರೆಗೆ ನಡೆಯುವ ಈ ಮಹೋತ್ಸವದಲ್ಲಿ ವಿಚಾರಗೋಷ್ಟಿ ಹಾಗೂ ಶ್ರೀಪಾದರು ರಚಿಸಲ್ಪಟ್ಟ ಕೃತಿ ಮತ್ತು ಸ್ಮರಣ ಸಂಚಿಕೆಗಳನ್ನು ಬಿಡುಗಡೆ ಮಾಡುವುದರೊಂದಿಗೆ ಹೋಮ-ಹವನಗಳನ್ನು ಮಾಡಲಾಗುತ್ತಿದೆ ಎಂದು ಶ್ರೀ ವಿದ್ಯೇಶ ತೀರ್ಥ ಅಭಿನಂದನಾ ಸಮಿತಿ ತಿಳಿಸಿದೆ.