ಆರ್ವಿ ಫಿಲಂಸ್ಗೆ 'ಉದಯೋನ್ಮುಖ ಚಿತ್ರ ನಿರ್ಮಾಣ ಸಂಸ್ಥೆ' ಪ್ರಶಸ್ತಿ
ಬೆಂಗಳೂರು: ವಿದ್ಯಾರ್ಥಿಗಳೇ ಸದಸ್ಯರಾಗಿರುವ ಕಿರುಚಿತ್ರ ನಿರ್ಮಾಣ ಸಂಸ್ಥೆ ಆರ್ವಿ ಫಿಲಂಸ್ಗೆ 3ನೇ ಬೆಂಗಳೂರು ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ 'ಉದಯೋನ್ಮುಖ ಚಿತ್ರ ನೀರ್ಮಾಣ ಸಂಸ್ಥೆ' ಪ್ರಶಸ್ತಿ ಲಭಿಸಿದೆ.
ರಾಜೇಂದ್ರ ವಿನೋದ್ ಎಂಬ ವಿದ್ಯಾರ್ಥಿ ಈ ಸಂಸ್ಥೆಯನ್ನು ಸ್ಥಾಪಿಸಿದ್ದು, ಈ ಸಂಸ್ಥೆಯಲ್ಲಿರುವವರೆಲ್ಲರೂ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸದಸ್ಯರೆಂಬುದು ಮತ್ತು ಅವರೆಲ್ಲರೂ ವಿದ್ಯಾರ್ಥಿಗಳೇ ಎಂಬುದು ಗಮನಾರ್ಹ. ಈ ವರೆಗೂ ವಿವಿಧ ಭಾಷೆಗಳಲ್ಲಿ ಸುಮಾರು 6 ಕಿರುಚಿತ್ರ, ಒಂದು ಸಾಕ್ಷ್ಯಚಿತ್ರ ಹಾಗೂ ಒಂದು ಜಾಹಿರಾತು ಚಿತ್ರ ನಿರ್ಮಿಸಿದ್ದೇವೆ ಎಂದು ಸಂಸ್ಥೆಯ ಸದಸ್ಯರು ಹೇಳಿಕೊಂಡಿದ್ದಾರೆ.