ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬಿಡಿಎನಲ್ಲಿ 'ಅನುಕಂಪ ಆಧಾರಿತ ಹುದ್ದೆ'ಗೆ ಆಗ್ರಹ

Srinivasa Murthy VN
Updated On : 7 Jul 2014, 6:10 am

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ನಲ್ಲಿ ಸೇವೆಸಲ್ಲಿಸಿ ಮೃತಪಟ್ಟವರ ಕುಟುಂಬಸ್ಥರಿಗೆ ಅನುಕಂಪದ ಆಧಾರದ ಮೇಲೆ ಹುದ್ದೆ ನೀಡುವಂತೆ ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕೆ ಆಗ್ರಹಿಸಿದೆ.

ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆ ಅಧ್ಯಕ್ಷ ಬಿ.ಎಂ.ಶ್ರೀನಿವಾಸ್ ಅವರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಲಂಚ ತೆಗೆದುಕೊಳ್ಳುವ ಮೂಲಕ ಅಕ್ರಮವಾಗಿ ನೇಮಕಾತಿ ನಡೆಯುತ್ತಿದೆ. ಈ ಹಿಂದೆ ಮೃತಪಟ್ಟಿದ್ದ ಖಾಯಂ ನೌಕರರಿಗೆ ಅನುಕಂಪದ ಆಧಾರದ ಮೇಲೆ ನೀಡಬೇಕಿದ್ದ ಹುದ್ದೆಯನ್ನು ನೀಡದೇ  ಅವರನ್ನು ಸೂಪರ್ ನ್ಯೂಮರಿ ಕೋಟಾಗೆ ಸೇರಿಸಲಾಗಿದೆ. ಅಲ್ಲದೆ ಇದೇ ಹುದ್ದೆಗಳಿಗೆ ಲಂಚಪಡೆದು ಬೇರೆಯವರನ್ನು ಆಯ್ಕೆ ಮಾಡುತ್ತಿದೆ. ಅಧಿಕಾರಿಗಳ ಅಕ್ರಮವನ್ನು ತಡೆದು ಅರ್ಹ ಅಭ್ಯರ್ಥಿಗಳಿಗೇ ಆ ಹುದ್ದೆಗಳನ್ನು ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ನೊಂದ ಅಭ್ಯರ್ಥಿ ಪಾವನಾ ಅವರು ಅರ್ಹ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಿ ಎಂದು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement