ಎಂ.ಪಿ.ಪ್ರಕಾಶ್ 74ನೇ ಜಯಂತ್ಯೋತ್ಸವ
ಬೆಂಗಳೂರು: ಖ್ಯಾತ ರಾಜಕಾರಣಿ ದಿ.ಎಂ.ಪಿ.ಪ್ರಕಾಶ್ ಅವರ 74 ನೇ ಜಯಂತ್ಯೋತ್ಸವ ಅಂಗವಾಗಿ 'ರಂಗಭಾರತಿ'ಯ ಸುವರ್ಣ ಮಹೋತ್ಸವವನ್ನು ಜುಲೈ 11 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ.
ಜುಲೈ 11ರ ಬೆಳಿಗ್ಗೆ 10.30ಕ್ಕೆ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ರಂಗಭಾರತಿಯ ಸಾಕ್ಷ್ಯಚಿತ್ರಗಳು, ಗ್ರಾಮೀಣ ರಂಗಭೂಮಿಯ ಇತ್ತೀಚಿನ ಬೆಳವಣಿಗೆ ಕುರಿತಾದ ವಿಚಾರ ಸಂಕಿರಣ ಸೇರಿದಂತೆ 'ರಂಗ ಸೊಬಗು' ಎಂಬ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸಮಾರಂಭವನ್ನು ನಿವೃತ್ತ ಐ.ಎ.ಎಸ್. ಅಧಿಕಾರಿಯಾದ ಚಿರಂಜೀವಿ ಸಿಂಗ್ ಉದ್ಘಾಟಿಸಲಿದ್ದು, ಕರ್ನಾಟಕದ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗಡೆ, ರಂಗಭಾರತಿಯ ಗೌರವಾಧ್ಯಕ್ಷ ಹಾಗೂ ಶಾಸಕರಾದ ಎಂ.ಪಿ.ರವೀಂದ್ರ, ನಿವೃತ್ತ ಐ.ಎ.ಎಸ್ ಅಧಿಕಾರಿ ಗೌರಿ ತ್ರಿವೇದಿ ಸೇರಿದಂತೆ ನಿವೃತ್ತ ಐ.ಪಿ.ಎಸ್. ಅಧಿಕಾರಿ ಗೋಪಾಲ್.ಬಿ. ಹೊಸೂರು ಅಧ್ಯಕ್ಷ ವಹಿಸಲಿದ್ದಾರೆ.