ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಎಸ್‌ಎಂಎಸ್ ಮಾಡಿ ಬಿಸಿ ಬಿಸಿ ಊಟ ಪಡೆಯಿರಿ

ರೈಲುಗಳಲ್ಲಿ ಎಸ್‌ಎಂಎಸ್ ಮತ್ತು ಈ ಮೇಲ್ ಮೂಲಕ ಬಿಸಿ ಬಿಸಿ ಆಹಾರ ಪಡೆಯುವ ಯೋಜನೆ..

Srinivasa Murthy VN
Updated On : 8 Jul 2014, 3:07 am

ನವದೆಹಲಿ: ರೈಲುಗಳಲ್ಲಿ ಕೇವಲ ಎಸ್‌ಎಂಎಸ್ ಮತ್ತು ಈ ಮೇಲ್ ಮೂಲಕ ಬಿಸಿ ಬಿಸಿ ಆಹಾರ ಪಡೆಯುವ ಯೋಜನೆ ಶೀಘ್ರದಲ್ಲಿಯೇ ಜಾರಿಗೆ ಬರಲಿದೆ.

ರೈಲುಗಳಲ್ಲಿನ ಆಹಾರ ಪೂರೈಕೆ ವ್ಯವಸ್ಥೆಗೆ ಹೈಟೆಕ್ ಟಚ್ ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಕೇವಲ ಎಸ್‌ಎಂಎಸ್ ಮತ್ತು ಈ ಮೇಲ್‌ಗಳನ್ನು ರವಾನಿಸುವ ಮೂಲಕ ತಾವಿರುವ ಜಾಗಕ್ಕೇ ಬಿಸಿ ಬಿಸಿ ಊಟವನ್ನು ತರಿಸಿಕೊಳ್ಳಬಹುದಾಗಿದೆ. ಈ ಕುರಿತು ಕೇಂದ್ರ ರೈಲ್ವೇ ಸಚಿವರ ಡಿ.ವಿ.ಸದಾನಂದಗೌಡ ಅವರು ಕ್ರಮಕ್ಕೆ ಮುಂದಾಗಿದ್ದು, ಇಂದು ನವದೆಹಲಿಯಲ್ಲಿ ಅವರು ಮಂಡಿಸಿರುವ 2014-15ರ ಸಾಲಿನ ರೈಲ್ವೇ ಬಜೆಟ್‌ನಲ್ಲಿ ರೈಲುಗಳಲ್ಲಿ ಪೂರೈಕೆಯಾಗುವ ಆಹಾರಗಳ ಗುಣಮಟ್ಟ ಮತ್ತು ಪೂರೈಕೆ ವ್ಯವಸ್ಥೆಯನ್ನು ಉನ್ನತ ಶ್ರೇಣಿಗೇರಿಸಲು ನಿರ್ಧರಿಸಿದ್ದಾರೆ.

ಪ್ರಯಾಣಿಕರ ಅನುಕೂಲ ಮತ್ತು ಆರೋಗ್ಯದ ದೃಷ್ಟಿಯಿಂದ ರೈಲಿನಲ್ಲಿಯೇ ಪ್ರತಿಷ್ಟಿತ ಆಹಾರ ಸಂಸ್ಥೆಗಳ ಉತ್ತಮ ಗುಣಮಟ್ಟದ ಮತ್ತು ಪೌಶ್ಟಿಕಾಂಶಯುಕ್ತ ಆಹಾರಗಳನ್ನು ಪೂರೈಕೆ ಮಾಡಲು ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಪ್ರಯಾಣಿಕರಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡುವ ಆಹಾರ ಪೂರೈಕದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸದಾನಂದಗೌಡ ಅವರು ಎಚ್ಚರಿಕೆ ನೀಡಿದ್ದಾರೆ.

ಪ್ರಸ್ತುತ ರೈಲುಗಳಲ್ಲಿ ಆಹಾರ ಪೂರೈಕೆ ಮಾಡುತ್ತಿರುವ ಆಹಾರ ಸರಬರಾಜು ಸಂಸ್ಥೆಗಳ ಪಟ್ಟಿಗಳನ್ನು ತರಿಸಿ, ಕಳಪೆ ಗುಣಮಟ್ಟದ ಆಹಾರ ಪೂರೈಕೆದಾರರಿಗೆ ದಂಡ ಅಥವಾ ಅವರ ಗುತ್ತಿಗೆಯನ್ನೇ ರದ್ದು ಮಾಡುವುದಾಗಿ ಅವರು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement