ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮಳೆಕೊಯ್ಲು ಪದ್ದತಿಗೆ ದೇಶಕ್ಕೇ ಮಾದರಿಯಾದ ಕಾಡುಜನ

ನೀರಿನ ಅಭಾವದಿಂದ ಬೇಸತ್ತ ಜೆಮಶೆಡ್‌ಪುರದ ಕಾಡುಪ್ರದೇಶದ ಜನ ತಮ್ಮದೇ ಆದ ರೀತಿಯಲ್ಲಿ ಮಳೆಕೊಯ್ಲು..

Srinivasa Murthy VN
Updated On : 8 Jul 2014, 6:37 am

ಜೆಮ್‌ಶೆಡ್‌ಪುರ: ನೀರಿನ ಅಭಾವದಿಂದ ಬೇಸತ್ತ ಜೆಮಶೆಡ್‌ಪುರದ ಕಾಡುಪ್ರದೇಶದ ಜನ ತಮ್ಮದೇ ಆದ ರೀತಿಯಲ್ಲಿ ಮಳೆಕೊಯ್ಲು ಪದ್ದತಿಯನ್ನು ಅಳವಡಿಸಿಕೊಂಡು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ.

ಈಗ್ಗೆ 2 ವರ್ಷಗಳ ಹಿಂದೆ ಉಂಟಾಗಿದ್ದ ಕ್ಷಾಮದಿಂದ ನಲುಗಿ ಹೋಗಿದ್ದ ಗ್ರಾಮದಲ್ಲಿ ಸುಮಾರು 250 ಅಡಿಗಳಷ್ಟು ಭೂಮಿ ತೋಡಿದರೂ ನಿರು ಸಿಗುತ್ತಿರಲಿಲ್ಲ. ಆದರೆ ಇದೀಗ ಮಳೆಕೊಯ್ಲು ಪದ್ದತಿ ಅಳವಡಿಸಿಕೊಂಡ ನಂತರ ಕೇವಲ 70 ಅಡಿಗಳಲ್ಲೇ ನೀರು ಧಾರಾಕಾರವಾಗಿ ಸಿಗುತ್ತಿದೆ. ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಪ್ಲಾಸ್ಟಿಕ್ ಪೈಪುಗಳನ್ನು ತಮ್ಮ ತಮ್ಮ ಮನೆಯ ಮೇಲ್ಛಾವಣಿಗಳ ಮೇಲೆ ಅಳವಡಿಸಿಕೊಂಡು ಮಳೆ ನೀರನ್ನು ಭೂಮಿಯೊಳಗೇ ಇಂಗಿಸಿ ಮತ್ತು ಮಳೆ ನೀರನ್ನು ಶೇಖರಣೆ ಮಾಡಿಕೊಳ್ಳುವ ಮೂಲಕ ಗ್ರಾಮದಲ್ಲಿರುವ ಕಾಡುಜನ ನೀರನ್ನು ಸಂರಕ್ಷಿಸುತ್ತಿದ್ದಾರೆ.

ಅಲ್ಲದೆ ಪ್ರತಿ ನಿತ್ಯ ಸುಮಾರು 20 ಸಾವಿರ ಲೀಟರ್‌ನಷ್ಟು ನೀರನ್ನು ಶೇಖರಣೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಗ್ರಾಮದಲ್ಲಿ ಸುಮಾರು 30 ಕುಟುಂಬಗಳು ಮಳೆಕೊಯ್ಲು ಪದ್ಧತಿ ಅಳವಡಿಸಿಕೊಂಡು, ತಾವು ಶೇಖರಿಸಿಕೊಂಡ ಇದೇ ನೀರನ್ನು ಕ್ರಮ ಬದ್ಧವಾಗಿ ಬಳಸಬೇಕು ಎಂಬ ಅಲಿಖಿತ ಕಟ್ಟಳೆಯನ್ನು ಪಾಲಿಸುತ್ತಿದ್ದಾರೆ. ಹೀಗಾಗಿಯೇ ನೀರನ್ನು ಸಂಗ್ರಹ ಮಾಡಿಕೊಂಡು ವರ್ಥ ಮಾಡದೇ ಬಳಸುತ್ತಿದ್ದಾರೆ. ಆ ಮೂಲಕ ಇಡೀ ದೇಶಕ್ಕೆ ಈ ಕಾಡುಜನ ಮಾದರಿಯಾಗಿ ನಿಂತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement