ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಅಂಜನಾಮೂರ್ತಿ ಕಸವಿಲೇವಾರಿ: ಗ್ರಾಮಸ್ಥರ ವಿರೋಧ

Srinivasa Murthy VN
Updated On : 14 Jul 2014, 7:16 am

ಬೆಂಗಳೂರು: ಅಂಜನಾಮೂರ್ತಿ ಹಾಗೂ ಕರೀಂಸೊಣ್ಣೆ ಹಳ್ಳಿಯಲ್ಲಿ ಕಸವಿಲೇವಾರಿ ಮಾಡುವುದರಿಂದ ತಿಪ್ಪಗೊಂಡನಹಳ್ಳಿ ಜಲಾಶಯ ಕಲುಷಿತಗೊಳ್ಳುತ್ತದೆ ಎಂದು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಗಲೇ ಬಿಬಿಎಂಪಿ ದೊಡ್ಡಬಳ್ಳಾಪುರದ ಚೀರೇನಹಳ್ಳಿ, ಹುಸ್ಕೂರು ಮತ್ತು ಸಾಸಲದ ಮೂರು ಗ್ರಾಮಗಳಲ್ಲಿ ಕಸವಿಲೇವಾರಿ ಮಾಡುತ್ತಿದೆ.
ಇದಾಗಿಯೂ ಅಂಜನಾಮೂರ್ತಿ ನಗರ ಹಾಗೂ ಕರೀಂಸೊಣ್ಣೇನ  ಗ್ರಾಮದ ಜಮೀನುಗಳನ್ನು ಬಿಬಿಎಂಪಿ ಅಧಿಕಾರಿ ಹಾಗೂ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಪರಿಶೀಲನೆ ನಡೆಸಿದ್ದಾರೆ.
ಒಂದು ವೇಳೆ ಈ ಕ್ಷೇತ್ರವನ್ನೂ ಕಸವಿಲೇವಾರಿಗೆ ಬಳಸಿದರೆ ಸ್ಥಳೀಯರು ಸಂಕಷ್ಟದಲ್ಲಿ ಜೀವನ ನಡೆಸುವಂತಾಗುತ್ತದೆ.
ಆ ಸ್ಥಳದಲ್ಲಿ ಈಗಾಗಲೇ ಕೈಗಾರಿಕಾ ಕ್ಷೇತ್ರ ಸೇರಿದಂತೆ ಸಂಶೋಧನಾ ಕೇಂದ್ರಗಳಿವೆ. ಕಸವಿಲೇವಾರಿಯಿಂದ ಅವರು ಸ್ಥಳವನ್ನು ಬಿಡುವಂತಾಗುತ್ತದೆ.
ಮುಖ್ಯವಾಗಿ ಈ ಪ್ರದೇಶ ಅರ್ಕಾವತಿ ನದಿಯ ತಪ್ಪಲಿನಲ್ಲಿರುವುದರಿಂದ ಮಳೆ ಬಂದಾಗ ಕಸ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಸೇರುವ ಸಂಭವವಿದೆ. ಆದ್ದರಿಂದ ಈ ಕೂಡಲೇ ಸರ್ಕಾರ ಎಚ್ಚೆತ್ತು ಕೊಂಡು ಯೋಜನಾ ಕಾರ್ಯವನ್ನು ಕೈ ಬಿಡಬೇಕೆಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement