ಗೋಡೆ ಕುಸಿತ: 7 ಮಕ್ಕಳು ಸೇರಿದಂತೆ, 9 ಜನರಿಗೆ ಗಾಯ
ಖಂಡ್ವಾ: ಪವಿತ್ರ ಸ್ಥಳ ಗುರುದ್ವಾರದ ಗಡಿ ಗೋಡೆಯೊಂದು ಕುಸಿದ ಪರಿಣಾಮ 7 ಜನ ಸಾವನ್ನಪ್ಪಿದ್ದು, 9 ಜನರು ಗಾಯಗೊಂಡಿದ್ದಾರೆ.
ಮಧ್ಯಪ್ರದೇಶ ದ್ವಾಲತ್ಪುರದ ಗುರುದ್ವಾರದಲ್ಲಿ ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಈ ಅನಾಹುತ ಸಂಭವಿಸಿದೆ. ಗೋಡೆಯ ಹಿಂಬದಿಯಲ್ಲೇ ಗುಡಿಸಲಿನಲ್ಲಿ ವಾಸವಿದ್ದ ಜನ ಮೈ ಮರೆತು ಮಲಗಿದ್ದರು.
ಈ ವೇಳೆ 40 ಅಡಿ ಎತ್ತರವಿದ್ದ ಗಡಿ ಗೋಡೆಯೊಂದು ಕುಸಿದಿದೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಸ್ಥಳೀಯ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, 2 ಸ್ಥಿತಿ ಗಂಭೀರವಿರುವ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಇಂದೋರ್ಗೆ ಆಸ್ಪತ್ರೆಗೆ ಕಳುಹಿಸಲಾಗಿದೆ.
ಪ್ರಕರಣ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ರಕ್ಷಣಾ ಸಿಬ್ಬಂದಿ ರಕ್ಷಣಾಕಾರ್ಯಾಚರಣೆ ನಡೆಸಿದ್ದಾರೆ.
ಮೃತರನ್ನು ಜನೂಬ್ ಅಲ್ತಾಫ್(15), ಉಸ್ಮನ್ ಅಲ್ತಾಫ್ (11), ಮೊಹ್ಸಿನ್ ಅಲ್ತಾಫ್(13), ಅಸ್ಮನ್ ಹಫೀಜ್ (02), ಮನೀಶಾ(1), ಸನ್ನಿಸ (4 ತಿಂಗಳು) ಮತ್ತು ಅಫ್ರೀನ್ ( 6ತಿಂಗಳು) ಎಂದು ಗುರುತಿಸಲಾಗಿದೆ.