ಅತ್ಯಾಚಾರದ ವಿರುದ್ಧ ಪ್ರತಿಭಟನಾ ರ್ಯಾಲಿ
ಬೆಂಗಳೂರು: ಮುಗ್ಧ ಮಕ್ಕಳ ಮೇಲಿನ ಅತ್ಯಾಚಾರವನ್ನು ವಿರೋಧಿಸಿ ಶ್ರದ್ಧಾ ಪೋಷಕರ ಸಂಘ ಜುಲೈ 27 ರಂದು ರಾಜಾಜಿನಗರದ 6ನೇ ವಿಭಾಗದಲ್ಲಿ ಪ್ರತಿಭಟನಾ ನಿರತ ರ್ಯಾಲಿಯನ್ನು ಹಮ್ಮಿಕೊಂಡಿದೆ. ರಾಜಾಜಿನಗರ 6ನೇ ವಿಭಾಗದ ಗಣಪತಿ ಸೇವಾ ಸಮಿತಿ ದೇವಸ್ಥಾನದಲ್ಲಿ ಬೆಳಿಗ್ಗೆ 9.30ಕ್ಕೆ ಪ್ರಾರಂಭವಾಗುವ ಈ ರ್ಯಾಲಿಗೆ ಶ್ರದ್ಧಾ ಪೋಷಕರ ಸಂಘದ ಅಧ್ಯಕ್ಷ ಆರ್.ವಿ.ಹರೀಶ್ ಚಾಲನೆ ನೀಡಲಿದ್ದಾರೆ.