ಬಿ.ನ್ಯಾಮಗೌಡರಿಗೆ ಸಚಿವ ಸ್ಥಾನಕ್ಕಾಗಿ ಗಾಣಿಗ ಸಮಾಜದ ಒತ್ತಾಯ
ಬೆಂಗಳೂರು: ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸೇವೆಸಲ್ಲಿಸಿಕೊಂಡು ಬರುತ್ತಿರುವ ಬಿ.ನ್ಯಾಮಗೌಡರಿಗೆ ಸಚಿವ ಸಂಪುಟದಲ್ಲಿ ಮಂತ್ರಿ ಪದವಿ ನೀಡುವಂತೆ ವಿಜಾಪುರ ಜಿಲ್ಲಾ ಗಾಣಿಗ ಸಮಾಜ ಸಂಘ ಸರ್ಕಾರಕ್ಕೆ ಒತ್ತಾಯಿಸಿದೆ.
ಈ ಕುರಿತು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ವಿಜಾಪುರ ಜಿಲ್ಲಾ ಗಾಣಿಗ ಸಮಾಜ ಸಂಘದ ಅಧ್ಯಕ್ಷ ಎಸ್.ಎಸ್.ಅರಕೇರಿ ಅವರು, ಗಾಣಿಗ ಸಮಾಜ ಹಿಂದುಳಿದ ಸಮಾಜವಾಗಿದ್ದು, ನಮ್ಮ ಸಮಾಜದ ಜನರೇ ಪ್ರತಿನಿಧಿಗಳಾದರೆ ನಮ್ಮ ಸಂಸ್ಕೃತಿ ಗಟ್ಟಿಗೊಳ್ಳುವುದಕ್ಕೆ ಸಹಾಯಕರವಾಗುತ್ತದೆ. ಹೀಗಾಗಿ ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಹಲವು ವರ್ಷದಿಂದ ಸೇವೆ ಸಲ್ಲಿಸಿರುವ ಬಿ.ನ್ಯಾಮಗೌಡರಿಗೆ ಸಂಪುಟದಲ್ಲಿ ಮಂತ್ರಿ ಸ್ಥಾನವನ್ನು ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಮನವಿ ನೀಡಿದ್ದಾರೆ.