ಜು.26ಕ್ಕೆ ಪ್ರೊಸ್ಟೇಟ್ ಕ್ಯಾನ್ಸರ್ ಸಮಾವೇಶ
ಬೆಂಗಳೂರು: ಬೆಂಗಳೂರು ಯೂರೊಲಾಜಿಕಲ್ ಸಂಸ್ಥೆಯ ಸಹಯೋಗದೊಂದಿಗೆ ಗ್ಲೋಬಲ್ ಪ್ರೊಸ್ಟೇಟ್ ಡಿಸೀಸ್ ಫೌಡೇಶನ್ ಸಂಸ್ಥೆಯು ಜುಲೈ 26 ರಂದು ನಗರದಲ್ಲಿ ಪ್ರೊಸ್ಟೇಟ್(ಜನನಾಂಗ) ಕ್ಯಾನ್ಸರ್ ಕುರಿತು ಸಮಾವೇಶ ಆಯೋಜಿಸಿದೆ.
ಬೆಂಗಳೂರಿನ ಸ್ಯಾಂಕಿ ರಸ್ತೆಯಲ್ಲಿರುವ ಲಿ.ಮೆರಿಡಿಯನ್ ಹೋಟೆಲ್ನಲ್ಲಿ ಈ ಸಮಾವೇಶವನ್ನು ಆಯೋಜಿಸಲಾಗಿದ್ದು, ಶನಿವಾರ ಬೆಳಿಗ್ಗೆ 10.15ಕ್ಕೆ ಸಂಘಟನಾ ಅಧ್ಯಕ್ಷ ಡಾ.ನಾಗರಾಜಯ್ಯ ಅವರು ಚಾಲನೆ ನೀಡಲಿದ್ದಾರೆ.
ಡಾ.ನಾಗಭೂಷಣ್, ಡಾ.ರಮೇಶ್.ಡಿ ಮತ್ತು ಡಾ.ಕೇಶವ ಮೂರ್ತಿ ಸೇರಿದಂತೆ ಹಲವು ತಜ್ಞ ವೈದ್ಯರು ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.