ಈಗಿನ ಸುದ್ದಿ

ದಾಖಲೆಯ ಏರಿಕೆ ಕಂಡ ನಿಫ್ಟಿ

ಭಾರತೀಯ ಷೇರುಮಾರುಕಟ್ಟೆಯಲ್ಲಿ ಭಾರಿ ವಹಿವಾಟು ನಡೆದ ಪರಿಣಾಮ ನಿಫ್ಟಿ 7, 809 ಅಂಶಗಳಿಗೇರಿದೆ.

ಮುಂಬೈ: ಭಾರತೀಯ ಷೇರುಮಾರುಕಟ್ಟೆಯಲ್ಲಿ ಭಾರಿ ವಹಿವಾಟು ನಡೆದ ಪರಿಣಾಮ ನಿಫ್ಟಿ 7, 809 ಅಂಶಗಳಿಗೇರಿದೆ.

ಮಾಹಿತಿ ಮತ್ತು ತಂತ್ರಜ್ಞಾನ, ವಾಹನ ಘಟಕಗಳ ಷೇರುಗಳಿಗೆ ಭಾರಿ ಬೇಡಿಕೆ ಕಂಡುಬಂದ ಹಿನ್ನಲೆಯಲ್ಲಿ ನಿಫ್ಟಿ 7, 809ಕ್ಕೆ ಏರಿಕೆಯಾಗಿದೆ. ಮಂಗಳವಾರ ಸಾಗರೋತ್ತರ ಷೇರುದಾರರು ಸುಮಾರು 412 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದು ಕೂಡ ಷೇರು ಮಾರುಕಟ್ಟೆ ಚೇತರಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ.

ಆರ್ಥಿಕ ತಜ್ಞರ ಅಭಿಪ್ರಾಯದಂತೆ ಮುಂದಿನ ಒಂದು ವಾರಗಳ ಕಾಲ ಭಾರತೀಯ ಷೇರುಮಾರುಕಟ್ಟೆಯಲ್ಲಿ ಇದೇ ಪರಿಸ್ಥಿತಿ ಮುಂದುವರೆಯುವ ಭರವಸೆ ಇದ್ದು, ನಿಫ್ಟಿ 8000 ಗಡಿ ದಾಟುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಚಿಲ್ಲರೆ ಮಾರುಕಟ್ಟೆಯಲ್ಲಿಯೂ ವಿದೇಶಿ ಬಂಡವಾಳದಾರರು ಹೆಚ್ಚಾಗಿ ವಹಿವಾಟು ನಡೆಸುತ್ತಿದ್ದು, ನಿಫ್ಟಿ ಮತ್ತಷ್ಟು ಏರಿಕೆಯಾಗುವ ಸಂಭವವಿದೆ.

ಆದರೆ ರಿಲಯನ್ಸ್ ಆಯಿಲ್ ಇಂಡಸ್ಟ್ರಿ ಮತ್ತು ಒಎನ್‌ಜಿಸಿ ಸಂಸ್ಥೆಗಳ ಷೇರುಗಳಲ್ಲಿ ಶೇ.1ರಷ್ಟು ಕುಸಿತಕಂಡಿದ್ದು, ಟಿಸಿಎಸ್‌ನ ಷೇರುಗಳ ಮೌಲ್ಯ 2, 583ರು.ಗೆ ಏರಿಕೆಯಾಗಿದೆ. ಭಾರತೀಯ ಷೇರುಮಾರುಕಟ್ಟೆಯಂತೆಯೇ ಏಷ್ಯನ್ ಷೇರು ಮಾರುಕಟ್ಟೆ ಮತ್ತು ಯೂರೋಪಿಯನ್ ಷೇರುಮಾರುಕಟ್ಟೆಗಳು ಚೇತರಿಕೆ ಕಂಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!