ರಾಷ್ಟ್ರೀಯ ಕುಟುಂಬ ದಿನ
ರಾಷ್ಟ್ರೀಯ ಕುಟುಂಬ ದಿನವನ್ನು ಜುಲೈ 27 ರಂದು ಆರ್.ವಿ. ಡೆಂಟಲ್ ಕಾಲೇಜು ಆವರಣದಲ್ಲಿ ನಡೆಯಲಿದೆ.
ಬೆಂಗಳೂರು: ರಾಷ್ಟ್ರೀಯ ಕುಟುಂಬ ದಿನವನ್ನು ಜುಲೈ 27 ರಂದು ಆರ್.ವಿ. ಡೆಂಟಲ್ ಕಾಲೇಜು ಆವರಣದಲ್ಲಿ ನಡೆಯಲಿದೆ.
ಜನರಲ್ಲಿ ಮಾನವೀಯತೆ ಹಾಗೂ ಕಾಳಜಿ ಇದ್ದರೆ ಒಂದು ದೇಶ ಒಂದು ಕುಟುಂಬವಾಗಬಹುದು ಎಂಬ ಉದ್ದೇಶದಿಂದ ಕರುಣಾ ಸಂಸ್ಥೆ, ರಾಷ್ಟ್ರೀಯ ಕುಟುಂಬ ದಿನಾಚರಣೆಯನ್ನು ಆಚರಿಸುತ್ತಿದೆ. ರಾಷ್ಟ್ರೀಯ ಕುಟುಂಬ ದಿನವಾದ ಜುಲೈ 27 ರಂದು ಆರ್.ವಿ.ಡೆಂಟಲ್ ಕಾಲೇಜು ಆವರಣದಲ್ಲಿ ವಿಶ್ವ ಒಂದು ಕುಟುಂಬ ಎಂಬ ಶೀರ್ಷಿಕೆಯಡಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಪೋಷಕರು ಹಾಗೂ ಮಕ್ಕಳಿಗೆ ಕಲೆ ಸೇರಿದಂತೆ ಸ್ಪರ್ಧಾತ್ಮಕ ಆಟೋಟಗಳಿದ್ದು, ಪ್ರಶಸ್ತಿ ಪ್ರಧಾನ ಸಮಾರಂಭ ಇರುತ್ತದೆ.