'ಕಾಮನ್ ವೆಲ್ತ್'ನಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ
ಗ್ಲಾಸ್ಗೋನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಆಯೋಜಕರಿಂದ ಭಾರತ ರಾಷ್ಟ್ರಧ್ವಜಕ್ಕೆ ಅಪಮಾನವೆಸಗಲಾಗಿದೆ.
ಗ್ಲಾಸ್ಗೋ: ಗ್ಲಾಸ್ಗೋನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಆಯೋಜಕರಿಂದ ಭಾರತ ರಾಷ್ಟ್ರಧ್ವಜಕ್ಕೆ ಅಪಮಾನವೆಸಗಲಾಗಿದೆ.
ಕಾಮನ್‌ವೆಲ್ತ್ ಕ್ರೀಡಾಕೂಟದ ಸ್ವಾಗತ ಹಾಡನ್ನು ಹಾಡುವಾಗ ಆಯೋಜಕರು ಭಾರತ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಪ್ರದರ್ಶಿಸುವ ಮೂಲಕ ಅಪಮಾನವೆಸಗಿದ್ದಾರೆ. ಆಯೋಜಕರ ಅಜಾಗರೂಕತೆಯಿಂದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಕ್ರೀಡಾಕೂಟದ ಸ್ವಾಗತ ಹಾಡಾದ 'ಲೆಟ್ಸ್ ಬಿಗಾನ್ ದಿ ಗೇಮ್' ಎಂಬ ಹಾಡನ್ನು ಹಾಡುವಾಗ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಎಲ್ಲ ರಾಷ್ಟ್ರಗಳ ರಾಷ್ಟ್ರಧ್ವಜವನ್ನು ಪ್ರದರ್ಶಿಸುವುದು ವಾಡಿಕೆಯಾಗಿದ್ದು, ಅದರಂತೆ ನಿನ್ನೆಯ ಉದ್ಘಾಟನಾ ಸಮಾರಂಭದಲ್ಲಿಯೂ ರಾಷ್ಟ್ರಧ್ವಜಗಳನ್ನು ಪ್ರದರ್ಶಿಸಲಾಗಿತ್ತು. ಆದರೆ ಆಯೋಜಕರು ಭಾರತ ದೇಶವನ್ನು ಪ್ರತಿನಿಧಿಸುವ ಧ್ವಜವನ್ನು ತಲೆಕೆಳಗಾಗಿ ಪ್ರದರ್ಶನ ಮಾಡುವ ಮೂಲಕ ಪ್ರಮಾದ ಎಸಗಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಕೂಟವನ್ನು ಆಯೋಜಸುವಾಗ ಆಯೋಜಕರಿಗೆ ಆಯಾ ದೇಶದ ಬಗೆಗಿನ ಕನಿಷ್ಟ ಜ್ಞಾನವೂ ಇಲ್ಲದೇ ಹೋದರೆ ಆಗುವ ಪ್ರಮಾದಗಳಿಗೆ ಪ್ರಸಕ್ತ ಘಟನೆ ಉತ್ತಮ ಉದಾಹರಣೆಯಂತಿದೆ.