ಪಿ.ಕೆ.ನಾರಾಯಣ ಜನ್ಮಶತಾಬ್ಧಿ ಸಂಸ್ಮರಣಾ ದಿನ
ಬೆಂಗಳೂರು: ದಕ್ಷಿಣ ಕನ್ನಡದ ಸ್ಮರಣೀಯ ಸಾಹಿತಿ ಪಿ.ಕೆ.ನಾರಾಯಣ ಜನ್ಮಶತಾಬ್ಧಿ ಸಂಸ್ಮರಣೆಯು ಜುಲೈ 27ರಂದು ನಡೆಯಲಿದೆ.
ದಕ್ಷಿಣ ಕನ್ನಡ ಸ್ಮರಣೀಯ ಸಾಹಿತಿಯಾಗಿ ಪ್ರಚಲಿತಗೊಂಡಿರುವ ಪಿ.ಕೆ.ನಾರಾಯಣ ಅವರ ಜನ್ಮಶತಾಬ್ಧಿ ಕಾರ್ಯಕ್ರಮ ಜುಲೈ 27ರ ಭಾನುವಾರ, ಚಾಮರಾಜ ಪೇಟೆ, ಕನ್ನಡ ಸಾಹಿತ್ಯ ಪರಿಷತ್ತಿನ ಪರಿಷನ್ಮಂದಿರದಲ್ಲಿ, ಬೆಳಿಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ.
ವರಶ್ರೀ ಪ್ರಕಾಶನ ಹಾಗೂ ಶ್ರೀ ವೆಂಕಟೇಶ್ ವಿದ್ಯಾಪೀಠ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪಿ.ಕೆ.ನಾರಾಯಣ ಅವರು ರಚಿಸಿರುವ ವಾಲ್ಮೀಕಿ ರಾಮಾಯಣದ ಕಥೆ ಕೃತಿ ಬಿಡುಗಡೆ ಸೇರಿದಂತೆ ಮಾಜಿ ಸಂಸದ ಹಾಗೂ ಶತಾಯುಷಿ ಕೆ.ಎಸ್.ಮಲ್ಲೇಗೌಡರಿಗೆ ಸನ್ಮಾನ ಸಮಾರಂಭ ನಡೆಯಲಿದೆ.
ಕಾರ್ಯಕ್ರಮದಲ್ಲಿ ಕನ್ನಡ ಸಂಫರ್ಷ ಸಮಿತಿ ಮಾಜಿ ಅಧ್ಯಕ್ಷ ಕೋಡಿಹೊಸಳ್ಳಿ ರಾಮಣ್ಣ, ಸರ್ಕಾರದ ನಿವೃತ್ತ ಉಪಕಾರ್ಯದರ್ಶಿ ಹೆಚ್.ವಿ.ರಾಮಚಂದ್ರರಾವ್, ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.