ಬಾಯಿ ಚಿಕಿತ್ಸಾ ಸಮಾವೇಶ
ಬೆಂಗಳೂರು: ಇಂಡಿಯನ್ ಅಕಾಡೆಮಿ ಆಫ್ ಓರಲ್ ಮೆಡಿಸಿನ್ ಅಂಡ್ ರೇಡಿಯಾಲಜಿ ರಾಷ್ಟ್ರೀಯ ಸಂಘಟನೆಯು, ಬಾಯಿ ಸಮಸ್ಯೆ ಕುರಿತು ದಯಾನಂದ ಸಾಗರ್ ವಿದ್ಯಾಸಂಸ್ಥೆಯಲ್ಲಿ ಇದೇ ತಿಂಗಳ 25, 26, 27 ರಂದು ಸಮಾವೇಶವನ್ನು ಹಮ್ಮಿಕೊಂಡಿದೆ.
ಬಾಯಿ ಚಿಕಿತ್ಸೆ ಹಾಗೂ ರೇಡಿಯಾಲಜಿ ಸಹಯೋಗದಿಂದ ನಡೆಯುವ ಈ ಕಾರ್ಯದಲ್ಲಿ ಬಾಯಿಯಲ್ಲಿ ಉಂಟಾಗುವ ರೋಗ, ಅದರ ಚಿಕಿತ್ಸೆ ಹಾಗೂ ತಡೆಗಟ್ಟುವ ವಿಧಾನಗಳ ಬಗ್ಗೆ ಹಲವು ತಜ್ಞರು ಸೇರಿದಂತೆ ರಾಯಲ್ ಕಾಲೇಜ್ ಆಫ್ ಸರ್ಜರಿ ಗ್ಲಾಸ್ಗೋ ವಿದ್ಯಾಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಂತರಾಷ್ಟ್ರೀಯ ವಾಚಕ ಡಾ.ಡೆವಿಡ್ ಫೆಲಿಕ್ಸ್ ರವರು ಚರ್ಚಿಸಲಿದ್ದಾರೆ.