ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

"ವಿಬ್ ಗಯಾರ್" ಮುಖ್ಯಸ್ಥನಿಗೆ ಜಾಮೀನು

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿಂದತೆ ಬಂಧಿತನಾಗಿದ್ದ ವಿಬ್ ಗಯಾರ್ ಶಾಲೆಯ ಮುಖ್ಯಸ್ಥ ರುಸ್ತು ಖೇರವಾಲ ಅವರನ್ನು ಜಾಮೀನಿನ ಮೇಲೆ ಬಿಡುಗುಡೆ ಮಾಡಲಾಗಿದೆ.

Srinivasa Murthy VN
Updated On : 24 Jul 2014, 5:15 am

ಬೆಂಗಳೂರು: 6 ವರ್ಷದ ಶಾಲಾ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿಂದತೆ ಬಂಧಿತನಾಗಿದ್ದ ವಿಬ್ ಗಯಾರ್ ಶಾಲೆಯ ಮುಖ್ಯಸ್ಥ ರುಸ್ತು ಖೇರವಾಲ ಅವರನ್ನು ಜಾಮೀನಿನ ಮೇಲೆ ಬಿಡುಗುಡೆ ಮಾಡಲಾಗಿದೆ.

ಕಳೆದ ಮಂಗಳವಾರ ಗೋವಾದ ಡಿಯು ಮತ್ತು ದಮನ್‌ನಲ್ಲಿ ರುಸ್ತುಂ ಖೇರವಾಲಾನನ್ನು ಬೆಂಗಳೂರು ಪೊಲೀಸರು ಬಂಧಿಸಿ ನಗರಕ್ಕೆ ಕರೆತಂದಿದ್ದರು, ರುಸ್ತುಂ ಖೇರವಾಲಾ ವಿರುದ್ಧ ಸಾಕ್ಷ್ಯ ನಾಶ ಮತ್ತು ತನಿಖೆಗೆ ಸಹಕರಿಸಿದ ಆರೋಪದ ಮೇಲೆ ದೂರು ದಾಖಲಿಸಿಕೊಳ್ಳಲಾಗಿತ್ತು. ರುಸ್ತುಂ ವಿರುದ್ಧ ಐಪಿಸಿ ಸೆಕ್ಷನ್ 21, 23 ಮತ್ತು 201ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದೀಗ ರುಸ್ತುಂ ಖೇರವಾಲಾ ಅವರಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಕಳೆದ ಜುಲೈ 2ರಂದು ಶಾಲೆಗೆ ಆಗಮಿಸಿದ್ದ ಬಾಲಕಿಯನ್ನು ಪುಸಲಾಯಿಸಿ, ಶಾಲೆಯ ನಿರ್ಜನ ಕೊಠಡಿಗೆ ಕರೆದೋಯ್ದು ಅತ್ಯಾಚಾರ ಮಾಡಲಾಗಿತ್ತು. ಘಟನೆ ಬಳಿಕ ಬಾಲಕಿ ಸಾಮಾನ್ಯವಾಗಿಯೇ ಶಾಲೆಗೆ ಬರುತ್ತಿದ್ದಳು. ಆದರೆ ದಿನಕಳೆದಂತೆ ಬಾಲಕಿಯ ಆರೋಗ್ಯದಲ್ಲಿ ಆಗುತ್ತಿದ್ದ ವ್ಯತ್ಯಯವನ್ನು ಗಮನಿಸಿದ ಪೋಷಕರು ಬಾಲಕಿಯನ್ನು ವೈದ್ಯರ ಬಳಿ ಕರೆದೊಯ್ದಿದ್ದಾರೆ. ಆಗ ಬಾಲಕಿಯ ಮೇಲೆ ನಡೆದ ದೌರ್ಜನ್ಯ ಬೆಳಕಿಗೆ ಬಂದಿದೆ.

ಕೂಡಲೇ ಬಾಲಕಿಯ ಪೋಷಕರು ಶಾಲೆಯ ವಿರುದ್ಧ ಜುಲೈ 14ರಂದು ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಾಲಕಿ ಮೇಲಿನ ದೌರ್ಜನ್ಯ ಪ್ರಕರಣ ತಡವಾಗಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಶಾಲೆಯ ಮಕ್ಕಳ ಪೋಷಕರು ಶಾಲೆಯ ವಿರುದ್ಧ ತಿರುಗಿಬಿದ್ದಿದ್ದು, ಕಳೆದ ಐದು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ ತಪ್ಪಿತಸ್ಥರನ್ನು ಕೂಡಲೇ ಬಂಧಿಸುವಂತೆ ಪೊಲೀಸರನ್ನು ಆಗ್ರಹಿಸುತ್ತಿದ್ದಾರೆ.

ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೊಲೀಸರು ಅನುಮಾನ ಬಂದ ಏಳು ಮಂದಿ ಶಾಲಾ ಸಿಬ್ಬಂದಿಯನ್ನು ಬಾಲಕಿಯ ಮುಂದೆ ಪರೇಡ್ ಮಾಡಿಸಿದ್ದರು. ಆದರೆ ಆರೋಪಿಯನ್ನು ನಿಖರವಾಗಿ ಗುರುತಿಸುವಲ್ಲಿ ಬಾಲಕಿ ವಿಫಲವಾಗಿದ್ದಳು. ಹೀಗಾಗಿ ತನಿಖೆಗೆ ಮುಂದಾಗಿರುವ ಪೊಲೀಸರು, ಮುಸ್ತಾಫ್‌ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರಕರಣ ಬೆಳಕಿಗೆ ಬಂದ ನಂತರ ಮುಸ್ತಾಫ್ ತಲೆಮರೆಸಿಕೊಂಡಿದ್ದ ಎಂದು ತಿಳಿದುಬಂದಿದೆ. ಆರೋಪಿಯ ಬಂಧನಕ್ಕಾಗಿ ವಿಶೇಷ ಕಾರ್ಯಾಚರಣೆ ನಡೆಸಿದ್ದ ವರ್ತೂರು ಪೊಲೀಸರು ಸಿಸಿಬಿ ಪೊಲೀಸರ ಸಹಾಯದೊಂದಿಗೆ ಮುಸ್ತಾಫ್‌ನನ್ನು ಬಂಧಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement