ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸೌಜನ್ಯ, ಮಾನವೀಯತೆಯೇ ಶಾಲೆಯ ಮುಖ್ಯ ವ್ಯವಸ್ಥೆ: ಬೇಲಿಮಠ ಸ್ವಾಮಿಜೀ

ಶಾಲೆಗಳಲ್ಲಿ ಐಶಾರಾಮಿ ಸೌಕರ್ಯವಷ್ಟೇ ಮುಖ್ಯ ವ್ಯವಸ್ಥೆಯಲ್ಲ, ಮಾನವೀಯತೆ, ಸೌಜನ್ಯತೆಯೇ ಮುಖ್ಯ ವ್ಯವಸ್ಥೆ ಎಂದು ಬೇಲಿಮಠದ ಶಿವರುದ್ರಸ್ವಾಮಿ ತಿಳಿಸಿದ್ದಾರೆ.

Srinivasa Murthy VN
Updated On : 24 Jul 2014, 7:32 am

ಬೆಂಗಳೂರು: ಶಾಲೆಗಳಲ್ಲಿ ಐಶಾರಾಮಿ ಸೌಕರ್ಯವಷ್ಟೇ ಮುಖ್ಯ ವ್ಯವಸ್ಥೆಯಲ್ಲ, ಮಾನವೀಯತೆ, ಸೌಜನ್ಯತೆಯೇ ಮುಖ್ಯ ವ್ಯವಸ್ಥೆ ಎಂದು ಬೇಲಿಮಠದ ಶಿವರುದ್ರಸ್ವಾಮಿ ತಿಳಿಸಿದ್ದಾರೆ.

ಮಹಿಳೆಯರ ಮೇಲಿನ ದೌರ್ಜನ್ಯದ ಕುರಿತು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇಂದಿನ ಶಾಲೆಗಳು ಐಶಾರಾಮಿ ವ್ಯವಸ್ಥೆ ನಿರ್ಮಿಸಿ ಲಕ್ಷಗಟ್ಟಲೇ ಹಣ ಪಡೆಯುವಲ್ಲಿ ಗಮನಹರಿಸುತ್ತಿದೆಯೇ ವಿನಃ ಶಾಲೆಯಲ್ಲಿ ಮಾನವೀಯತೆ ಸೌಜನ್ಯತೆ ಬಗ್ಗೆ ಆಲೋಚನೆ ಮಾಡದಿರುವುದೇ ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಕಾರಣವಾಗಿದೆ. ಅತ್ಯಾಚಾರ ವಿಷಯದಲ್ಲಿ ಬಾಲ್ಯಾವಧಿ, ವಯಸ್ಕ ಮಿತಿಯನ್ನು ನೋಡದೆ, ವಿಳಂಬ ನೀತಿಯನ್ನು ಅನುಸರಿಸದೆ ಪ್ರಕರಣದ ವಿರುದ್ದ ಕ್ರಮ ಕೈ ಗೊಳ್ಳಬೇಕು. ವಿಳಂಬ ನೀತಿಯಿಂದಲೇ ಕೆಲವು ಪ್ರಕರಣಗಳು ಮುಚ್ಚಿ ಹೋಗುವ ಸಾಧ್ಯಗಳಿರುತ್ತವೆ ಎಂದು ಸ್ವಾಮೀಜಿ ಹೇಳಿದರು.

ನಂತರ ಮಾತನಾಡಿದ ಪ್ರೋ.ಆರ್ಚ್.ಬಿಶಪ್.ಫಾದರ್ ರೋನ್ನಿ ಪ್ರಭು, ಕಾನೂನು ಒಂದೇ ಜೀವನ ವ್ಯವಸ್ಥೆಯನ್ನು ಬದಲಿಸಲು ಸಾಧ್ಯವಿಲ್ಲ. ಜೀವನ ವ್ಯವಸ್ಥೆ ಕೌರ್ಯತೆ ಬದಲಾಗಬೇಕಾದರೆ ಜನರ ಮನಸ್ಸು ಬದಲಾಗಬೇಕು. ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ನೀಡಬೇಕೆಂಬುದು ಸರಿ. ಅದರೊಂದಿಗೆ ವ್ಯಕ್ತಿ ಬೆಳೆಯುವ ವಾತಾವರಣ ಹಾಗೂ ಮನೆಯ ಶಿಕ್ಷಣವೂ ವ್ಯಕ್ತಿಯ ಗುಣಗಳನ್ನು ನಿರ್ಧರಿಸುತ್ತದೆ. ಈ ನಿಟ್ಟಿನಲ್ಲಿ ಜನ ಕಾರ್ಯ ನಿರ್ವಹಿಸಿದಾಗ ಮಾತ್ರ ಸ್ವಾಸ್ಥ್ಯ ಸಮಾಜವನ್ನು ಕಾಣಬಹುದು ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement