ನಿರ್ಮಾಪಕರಿಗೆ 'ಕಿಕ್': ಎರಡೇ ದಿನದಲ್ಲಿ 50 ಕೋಟಿ ಗಳಿಕೆ
ನಟ ಸಲ್ಮಾನ್ ಖಾನ್ ಅಭಿನಯದ ಹಿಂದಿ ಚಿತ್ರ 'ಕಿಕ್' ದಾಖಲೆ ಗಳಿಕೆ ಕಂಡಿದ್ದು, ಬಿಡುಗಡೆಯಾದ ಎರಡೇ ದಿನದಲ್ಲೇ 50 ಕೋಟಿ ದಾಖಲೆ ಗಳಿಕೆ ಕಂಡಿದೆ.
ಮುಂಬೈ: ನಟ ಸಲ್ಮಾನ್ ಖಾನ್ ಅಭಿನಯದ ಹಿಂದಿ ಚಿತ್ರ 'ಕಿಕ್' ದಾಖಲೆ ಗಳಿಕೆ ಕಂಡಿದ್ದು, ಬಿಡುಗಡೆಯಾದ ಎರಡೇ ದಿನದಲ್ಲೇ 50 ಕೋಟಿ ದಾಖಲೆ ಗಳಿಕೆ ಕಂಡಿದೆ.
ಮೂಲಗಳ ಪ್ರಕಾರ ಕಿಕ್ ಚಿತ್ರ ಬಿಡುಗಡೆಯಾದ ಮೊದಲ ದಿನವೇ 27.10 ಕೋಟಿ ಗಳಿಸಿತ್ತು. ಶನಿವಾರ ಮತ್ತೆ 26 ಕೋಟಿ ಗಳಿಕೆ ಮೂಲಕ ಚಿತ್ರವು ಕೇವಲ 2 ದಿನದಲ್ಲಿ 50 ಕೋಟಿಗೂ ಅಧಿಕ ದಾಖಲೆ ಕಂಡಿದೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ರಣ್‌ದೀಪ್ ಹೂಡಾ, ಜಾಕ್ವೆಲಿನ್ ಫರ್ನಾಂಡೀಸ್, ನವಾಜುದ್ದೀನ್ ಸಿದ್ದಿಕಿ ಅವರು ಅಭಿನಯಿಸಿದ್ದಾರೆ.
ಸಲ್ಮಾನ್ ಖಾನ್ ಅವರ ಈ ಹಿಂದಿನ ಚಿತ್ರ ಜೈಹೋ ಸೋಲು ಕಿಕ್ ಚಿತ್ರದ ಮೇಲೆ ನಕಾರಾತ್ಮಕ ಸನ್ನಿವೇಶವನ್ನು ಸೃಷ್ಟಿ ಮಾಡಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು. ಆದರೆ ಕಿಕ್ ಚಿತ್ರ ಆ ಎಲ್ಲ ವಿಚಾರಗಳನ್ನು ಬದಿಗೊತ್ತಿ, ದಾಖಲೆ ಗಳಿಕೆಕಂಡಿದೆ.