ಭಾರತದ ಅಭಿವೃದ್ಧಿಗೆ ಚೀನಾ ಸಹಕಾರ: ಸುಷ್ಮಾ ಸ್ವರಾಜ್
ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆ ಫಲಪ್ರದವಾಗಿದ್ದು, ಭಾರತದ ಅಭಿವೃದ್ಧಿಗೆ ಚೀನಾದಿಂದ ಸಂಪೂರ್ಣ ಸಹಕಾರ...
ನವದೆಹಲಿ: ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆ ಫಲಪ್ರದವಾಗಿದ್ದು, ಭಾರತದ ಅಭಿವೃದ್ಧಿಗೆ ಚೀನಾದಿಂದ ಸಂಪೂರ್ಣ ಸಹಕಾರ ಸಿಗಲಿದೆ ಎಂದು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರು ಭಾನುವಾರ ಹೇಳಿದ್ದಾರೆ.
ಚೀನಾ ವಿದೇಶಾಂಗ ಸಚಿವರೊಂದಿಗಿನ ಮಾತುಕತೆ ಬಳಿಕ ಮಾತನಾಡಿದ ಸುಷ್ಮಾ ಸ್ವರಾಜ್, ಉಭಯ ಸಚಿವರ ಭೇಟಿ ಹೃದಯ ಸ್ಪರ್ಶಿಯಾಗಿತ್ತು ಎಂದು ಹೇಳಿದ್ದಾರೆ. ಉಭಯ ದೇಶಗಳ ನಡುವಿನ ಮಾತುಕತೆ ಉಪಯುಕ್ತ ಹಾಗೂ ಫಲಪ್ರದವಾಗಿದೆ. ಅಲ್ಲದೆ ಭಾರತದ ಅಭಿವೃದ್ಧಿಗೆ ಚೀನಾದಿಂದ ಸಂಪೂರ್ಣ ಸಹಕಾರ ಸಿಗಲಿದೆ ನೀಡಲಿದೆ ಎಂದರು.
ಚೀನಾ ಆಕ್ರಮಿಸಿಕೊಂಡಿರುವ ಮಾನಸ ಸರೋವರ ಕುರಿತಾಗಿಯು ಚರ್ಚೆಗಳು ನಡೆದಿದ್ದು, ಮುಂದಿನ ದಿನಗಳಲ್ಲಿ ವಿವಾದ ಬಗೆ ಅರಿಯುವ ಸಾಧ್ಯತೆ ಇದೆ ಎಂದರು. ಇದೇ ವೇಳೆ ಭಾರತದ ನಿರ್ಧಾರಗಳಿಗೆ ಚೀನಾದಿಂದ ಬೆಂಬಲ ವ್ಯಕ್ತವಾಗಿದೆ. ಈ ಬೆಂಬಲವನ್ನು ಮುಂದಿನ ದಿನಗಳಲ್ಲೂ ಮುಂದುವರಿಸುವ ವಿಶ್ವಾಸವನ್ನು ವಾಂಗ್ ಯಿ ವ್ಯಕ್ತಪಡಿಸಿದ್ದಾರೆ ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಚೀನಾ ಜತೆ ಗಂಭೀರ ವಿಷಯಗಳ ಬಗ್ಗೆ ಮಾತುಕತೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಉಭಯ ದೇಶಗಳು ಪರಸ್ಪರ ಅನ್ಯೂನ್ಯವಾಗಿರುತ್ತದೆ ಎಂದರು.
ಸುಷ್ಮಾ ಸ್ವರಾಜ್ ಜತೆ ವಾಂಗ್ ಯಿ ಮಹತ್ವದ ಮಾತುಕತೆ ನಡೆಸಿದ್ದಾರೆ ವಿದೇಶಾಂಗ ಸಚಿವಾಲಯ ವಕ್ತಾರರು ತಿಳಿಸಿದ್ದು, ಉಭಯ ದೇಶಗಳ ವ್ಯಾಪಾರ ಸಂಬಂಧ ವೃದ್ಧಿ ಹಾಗೂ ಬಾಂಧವ್ಯ ವೃದ್ಧಿ ಕುರಿತು ಪ್ರಮುಖ ಚರ್ಚೆ ನಡೆಸಲಾಗಿದೆ ಎಂದರು.
ಪ್ರಸಕ್ತ ಪ್ರವಾಸದ ವೇಳೆ ವಾಂಗ್ ಯೀ ಅವರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಲಿದ್ದು, ಈ ವೇಳೆ ರಾಷ್ಟ್ರಪತಿ ಭವನದಲ್ಲಿ ವಾಂಗ್ ಯೀ ಅವರಿಗೆ ವಿಶೇಷ ಔತಣ ಕೂಟವನ್ನು ಕೂಡ ಏರ್ಪಡಿಸಲಾಗಿದೆ. ಬಳಿಕೆ ವಾಂಗ್ ಯೀ ಅವರು ನೂತನ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಲಿದ್ದಾರೆ. ನಾಳೆ ನವದೆಹಲಿಯಲ್ಲಿರುವ ಪ್ರಧಾನ ಮಂತ್ರಿಗಳ ಅಧಿಕೃತ ನಿವಾಸದಲ್ಲಿ ವಾಂಗ್ ಯೀ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಿ, ಸರ್ಕಾರ ರಚಿಸಿದ ಬಳಿಕ ನರೇಂದ್ರ ಮೋದಿ ಅವರಿಗೆ ಕರೆ ಮಾಡಿದ್ದ ಚೀನಾ ಅಧ್ಯಕ್ಷ ಕ್ಸಿ ಜಿಪಿಂಗ್, ಲೀ ಕಿಯಾಂಗ್ ಅವರು ಶುಭ ಹಾರೈಸಿದ್ದರು. ನೂತನ ಸರ್ಕಾರ ರಚನೆ ಬಳಿಕೆ ಇದೇ ಮೊದಲ ಬಾರಿಗೆ ಚೀನಾ ವಿದೇಶಾಂಗ ಸಚಿವರು ಭಾರತ ಪ್ರವಾಸ ಕೈಗೊಂಡಿದ್ದು, ಭೇಟಿ ವೇಳೆ ಉಭಯ ನಾಯಕರು ಗಡಿ ಭಧ್ರತೆಯಂತಹ ಗಂಭೀರ ವಿಚಾರಗಳು ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಲಿದ್ದಾರೆ.